ಕಾಶೀಮಠದ ಮಾಜಿ ಕಿರಿಯ ಯತಿ ನ್ಯಾಯಾಂಗ ಬಂಧನ

7

ಕಾಶೀಮಠದ ಮಾಜಿ ಕಿರಿಯ ಯತಿ ನ್ಯಾಯಾಂಗ ಬಂಧನ

Published:
Updated:

ಮಂಗಳೂರು: ಕಾಶೀ ಮಠ ಸಂಸ್ಥಾನದ ಮಾಜಿ ಕಿರಿಯ ಯತಿ ರಾಘವೇಂದ್ರ ತೀರ್ಥ ಅವರನ್ನು ಆಂಧ್ರ ಪ್ರದೇಶದ ಕಡಪ ಜಿಲ್ಲೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕಡಪ ಜಿಲ್ಲೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ಭಕ್ತರ ಜತೆ ವಾಸ್ತವ್ಯದಲ್ಲಿದ್ದ ಅವರ ಬಗ್ಗೆ ಅಕ್ಕಪಕ್ಕದವರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅವರ ಬಳಿ ದೇವರ ವಿಗ್ರಹಗಳು, ನಗದು ಸಿಕ್ಕಿದೆ.ಈ ಹಿಂದೆ ಕಾಶೀ ಮಠದ ಹಿರಿಯ ಯತಿ ಸುಧೀಂದ್ರ ತೀರ್ಥ ಮತ್ತು ರಾಘವೇಂದ್ರ ತೀರ್ಥ ಅವರ ಮಧ್ಯೆ ವಿವಾದ ಉಂಟಾಗಿತ್ತು. ಬಳಿಕ ಹಿರಿಯ ಯತಿಗಳು ಇವರನ್ನು ಬಿಟ್ಟು ಸಂಯಮೀಂದ್ರ ತೀರ್ಥ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದರು. ದೇವರ ಮೂಲ ವಿಗ್ರಹ ರಾಘವೇಂದ್ರ ತೀರ್ಥರ ಬಳಿಯಿತ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry