ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂ ಶುಭಾಶಯ

7

ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂ ಶುಭಾಶಯ

Published:
Updated:

ಜಮ್ಮು (ಐಎಎನ್‌ಎಸ್): ಕಣಿವೆ ರಾಜ್ಯದಲ್ಲಿ ಸೋಮವಾರ ಶಿವ ದೇವಾಲಯಗಳಲ್ಲಿ ಗಂಟೆ, ಜಾಗರಣೆಗಳ ನಿನಾದ. ಹಿಂದೂ-ಮುಸ್ಲಿಮರು ಪರಸ್ಪರ ಶುಭಾಶಯ ಕೋರುವ ಮೂಲಕ ಉಭಯ ಧರ್ಮೀಯರಲ್ಲಿ ಸಹೋದರತ್ವದ ವಾತಾವರಣ ನಿರ್ಮಾಣವಾಗಿತ್ತು.ಕಾಶ್ಮೀರದಲ್ಲಿ ಹಿಂದೂಗಳು ಕಾಶ್ಮೀರಿ ಪಂಡಿತರೆಂದೇ ಚಿರಪರಿಚಿತವಾಗಿದ್ದು, ಅವರ ಪಾಲಿಗೆ ಶಿವರಾತ್ರಿ ಅತ್ಯಂತ ದೊಡ್ಡ ಉತ್ಸವ. ಹಿಂದೂಗಳ ಪ್ರಭಾವ ಇರುವ ಪ್ರದೇಶಗಳಿಗೆ ಮುಸ್ಲಿಂ ಬಾಂಧವರು ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry