ಸೋಮವಾರ, ಮಾರ್ಚ್ 1, 2021
31 °C

ಕಾಶ್ಮೀರದಲ್ಲಿ ಹಿಮಪಾತ: ರಸ್ತೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರದಲ್ಲಿ ಹಿಮಪಾತ: ರಸ್ತೆ ತೆರವು

ಶ್ರೀನಗರ (ಪಿಟಿಐ): ಕಳೆದ ಎರಡು ದಿನಗಳಿಂದ   ಬೀಳುತ್ತಿರುವ ಹಿಮಪಾತ­ದಿಂದಾಗಿ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಡಿದ್ದ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ  ಗುರುವಾರವೂ ಮುಂದುವರೆದಿದೆ.ಹಿಮಪಾತದಿಂದಾಗಿ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಯಿತು. ಜನರು ಹಾಗೂ ಯಂತ್ರಗಳ ಸಹಾಯ­ದಿಂದ ತೆರವು ಕಾರ್ಯಾಚರಣೆ  ಆರಂಭಿ­ಸ­ಲಾಗಿದೆ. ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವ­ಕಾಶ ಕಲ್ಪಿಸಲಾಯಿತು ಎಂದು ಸಾರಿಗೆ ಇಲಾಖೆ ವಕ್ತಾರರು ತಿಳಿಸಿದ್ದಾರೆ.ಕಾಶ್ಮೀರ ಕಣಿವೆಯಲ್ಲಿ ಬುಧವಾರ ಬಿದ್ದ ಹಿಮ­ದಿಂದ  ಕಾಶ್ಮೀರ ರಸ್ತೆ ಸಂಪರ್ಕ ಕಡಿತ­ಗೊಂಡಿತ್ತು. ಅಲ್ಲದೇ ರೈಲು ಸಂಚಾರ ಹಾಗೂ ವಿಮಾನ ಹಾರಾಟ­ದಲ್ಲೂ ಅಸ್ತವ್ಯಸ್ತ ಉಂಟಾಗಿತ್ತು. ಕಾಶ್ಮೀರ ಸೇರಿದಂತೆ ಕೆಲ ಪ್ರದೇಶ­ಗಳಲ್ಲಿ ಈವರೆಗೂ ವಿದ್ಯುತ್‌ , ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.