ಸೋಮವಾರ, ಮೇ 17, 2021
23 °C

ಕಾಶ್ಮೀರಿ ಬಾಲೆಯರ ಆಗಮನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೂರದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾಹೋರ್ ತಾಲ್ಲೂಕಿನಿಂದ ಬಂದಿದ್ದ ಆ ಬಾಲೆಯರ ತಂಡ ನಗರದ ಕಬ್ಬನ್ ಪಾರ್ಕ್‌ನಲ್ನ್ ಬುಧವಾರ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಿತು.ಭಾರತೀಯ ಸೇನೆ ಏರ್ಪಡಿಸಿದ್ದ `ಸದ್ಭಾವನಾ ಯಾತ್ರೆ'ಯಲ್ಲಿ ಪಾಲ್ಗೊಂಡಿ ರುವ ಈ ತಂಡ ಉದ್ಯಾನನಗರದಲ್ಲಿ ಬಿಡಾರ ಹೂಡಿದೆ.

ಕಾಶ್ಮೀರದಿಂದ ಬಂದ ಈ ತಂಡದಲ್ಲಿ 20 ಹುಡುಗಿಯರಿದ್ದು, ಮೂರು ಜನ ಶಿಕ್ಷಕರು ಅವರ ಜೊತೆಗಿದ್ದಾರೆ. ನಗರದ ವಿಶ್ವೇಶ್ವರಯ್ಯ ಕೈಗಾರಿಕೆ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯ, ಕಬ್ಬನ್ ಪಾರ್ಕ್, ಬೆಂಗಳೂರು ಅರಮನೆ, ಇನ್ಫೋಸಿಸ್ ಕ್ಯಾಂಪಸ್, ಬಿಷಪ್ ಕಾಟನ್ ಬಾಲಕಿಯರ ಶಾಲೆ ಸೇರಿದಂತೆ ಹಲವು ತಾಣಗಳಿಗೆ ಈ ತಂಡ ಭೇಟಿ ನೀಡಿತು.ದೇಶದ ಇತರ ಭಾಗದ ಸಂಸ್ಕೃತಿ, ಶಿಕ್ಷಣ, ಪ್ರಸಕ್ತ ವಿದ್ಯಮಾನ, ಜೀವನ ವಿಧಾನವನ್ನು ಕಾಶ್ಮೀರದ ಮಕ್ಕಳಿಗೆ ಪರಿಚಯ ಮಾಡಿಕೊಡುವ ಉದ್ದೇಶ ದಿಂದ ಈ ಯಾತ್ರೆ ಏರ್ಪಡಿಸಲಾಗಿದೆ. `ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎನ್ನುವ ಭಾವವನ್ನು ಯುವಪೀಳಿಗೆಯಲ್ಲಿ ಗಟ್ಟಿಗೊಳಿಸಲು ಇಂತಹ ಯಾತ್ರೆಗಳು ನೆರವಾಗುತ್ತವೆ' ಎಂದು ಸೇನಾ ಅಧಿಕಾರಿಗಳು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.