ಕಾಶ್ಮೀರಿ ಹತ: ಪಾಕ್ ಮಾತು ನಂಬದ ಅಮೆರಿಕ

ಮಂಗಳವಾರ, ಜೂಲೈ 23, 2019
20 °C

ಕಾಶ್ಮೀರಿ ಹತ: ಪಾಕ್ ಮಾತು ನಂಬದ ಅಮೆರಿಕ

Published:
Updated:

ಲಂಡನ್ (ಪಿಟಿಐ): ಅಲ್‌ಖೈದಾದ ಕುಖ್ಯಾತ ಉಗ್ರ ಇಲ್ಯಾಸ್ ಕಾಶ್ಮೀರಿ ಡ್ರೋಣ್ ದಾಳಿಯಲ್ಲಿ ಹತನಾಗಿರುವುದು ಖಚಿತ ಎಂದು ಪಾಕಿಸ್ತಾನ ಪದೇಪದೇ ಹೇಳಿದ್ದರೂ ಅದನ್ನು ನಂಬದ ಅಮೆರಿಕ, ಆತನ ಬೇಟೆಗೆ ಕಾರ್ಯಾಚರಣೆ ಮುಂದುವರಿಸಿದೆ.ಪಾಕಿಸ್ತಾನದಲ್ಲಿ ಆತ ಇನ್ನೂ ಓಡಾಡಿಕೊಂಡಿದ್ದಾನೆ ಎಂದೇ ನಂಬಿರುವ ನಮ್ಮ  ಸೇನಾ ಪಡೆಗಳು ಆತನ ವಿರುದ್ಧ ಕಾರ್ಯತಂತ್ರ ರೂಪಿಸುತ್ತಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.ಅಮೆರಿಕದ ಡ್ರೋಣ್‌ಗಳು ವಜಿರಿಸ್ತಾನದ ತೋಟವೊಂದರ ಮೇಲೆ ಕ್ಷಿಪಣಿ ಉಡಾಯಿಸಿದಾಗ ಕಾಶ್ಮೀರಿ ಹತನಾಗಿರುವುದು ಶೇ 100ರಷ್ಟು ನಿಶ್ಚಿತ ಎಂದು ಪಾಕ್ ಗೃಹ ಸಚಿವ ರೆಹಮಾನ್ ಮಲಿಕ್ ಅವರೇ ಸ್ಪಷ್ಟಪಡಿಸಿದ್ದರು. ಪ್ರಧಾನಿ ಯೂಸುಫ್ ರಜಾ ಗಿಲಾನಿ ಕೂಡ, ಕಾಶ್ಮೀರಿ ಸತ್ತಿರುವುದನ್ನು ಅಮೆರಿಕ  ದೃಢಪಡಿಸಿದೆ ಎಂದಿದ್ದರು.ಆದರೆ ಇದೀಗ ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಇಲಾಖೆಗಳೆರಡೂ ಕಾಶ್ಮೀರಿ ಹತನಾಗಿದ್ದಾನೆಂಬುದನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯ ತಮ್ಮ ಬಳಿ ಇಲ್ಲ ಎಂದು ಹೇಳಿವೆ.`ಕಾಶ್ಮೀರಿ ಹತನಾಗಿದ್ದಾನೆಂಬ ಸುದ್ದಿ ಈ ಮುನ್ನ ಹಲವು ಬಾರಿ ಸುಳ್ಳಾಗಿದೆ. ಸದ್ಯ, ಆತನ ಸಾವನ್ನು ಖಚಿತಪಡಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಆತ ಇನ್ನೂ ಜೀವಂತವಾಗಿದ್ದೇನೆಂದೇ ಭಾವಿಸಿದ್ದೇವೆ~ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry