ಕಾಶ್ಮೀರ ಕಣಿವೆಗೆ ಮೊದಲ ರೈಲು

7

ಕಾಶ್ಮೀರ ಕಣಿವೆಗೆ ಮೊದಲ ರೈಲು

Published:
Updated:
ಕಾಶ್ಮೀರ ಕಣಿವೆಗೆ ಮೊದಲ ರೈಲು

ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಸಮೀಪದ ಬನಿಹಾಲ್ ಪಟ್ಟಣ ಮತ್ತು ಕಾಶ್ಮೀರ ಕಣಿವೆ ನಡುವೆ ಶುಕ್ರವಾರ ಮೊದಲ ರೈಲು ಚಲಿಸಿತು. ದೇಶದ ಅತಿದೊಡ್ಡ ಸುರಂಗ ಮಾರ್ಗವಿರುವ ಪೀರ್ ಪಂಜಾಲ್ ಕಣಿವೆ ಮೂಲಕ ಈ ರೈಲು ಹಾದು ಹೋಗುವ ಮೂಲಕ ಇತಿಹಾಸ ನಿರ್ಮಿಸಿತು.ಅನಂತನಾಗ್ ಜಿಲ್ಲೆಯ ಕಾಜಿಗುಂಡದಿಂದ ಬನಿಹಾಲ್  ನಡುವೆ ಪರೀಕ್ಷಾರ್ಥವಾಗಿ ರೈಲು ಓಡಿಸಲಾಯಿತು. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಅಧಿಕೃತವಾಗಿ ಸಂಚಾರ ಆರಂಭಿಸಲಿದೆ. ಹಿಮಪಾತ: ಕಣಿವೆ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ತಾಪಮಾನ 1.2 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry