ಶುಕ್ರವಾರ, ಮಾರ್ಚ್ 5, 2021
24 °C

ಕಾಶ್ಮೀರ ವಿಧಾನಸಭೆಯಲ್ಲಿ ಭುಗಿಲೆದ್ದ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರ ವಿಧಾನಸಭೆಯಲ್ಲಿ ಭುಗಿಲೆದ್ದ ಕೋಲಾಹಲ

ಜಮ್ಮು (ಐಎಎನ್‌ಎಸ್‌): ಹೊಸ ಆಡಳಿತಾ­ತ್ಮಕ ಘಟಕ­ಗಳನ್ನು  ಸ್ಥಾಪಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಜಮ್ಮು ಮತ್ತು ಕಾಶ್ಮೀ­ರದ ವಿಧಾನಸಭೆ ಅಧಿವೇಶನದಲ್ಲಿ ಮಂಗಳ­ವಾರ ವಿರೋಧ ಪಕ್ಷಗಳು ಎಬ್ಬಿಸಿದ ಕೋಲಾ­ಹಲದಲ್ಲಿ ಶಾಸಕರೊಬ್ಬರು ಗಾಯಗೊಂಡಿದ್ದಾರೆ.

‘ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿ’ಯ (ಪಿಡಿಪಿ) ಮುಸ್ತಾಕ್‌ ಅಹ್ಮದ್ ಷಾ ಗಾಯಗೊಂಡ ಶಾಸಕ. ‘ಪಿಡಿಪಿ’ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳನ್ನು ಗುರಿ­ಯಾಗಿಟ್ಟುಕೊಂಡು ಸರ್ಕಾರ 659 ‘ಹೊಸ ಆಡಳಿ­ತಾತ್ಮಕ ಘಟಕ’ಗಳನ್ನು ಸ್ಥಾಪಿಸಲು ಹೊರಟಿದೆ ಎಂದು ಸಭಾಧ್ಯಕ್ಷರ ಪೀಠದ ಮುಂದೆ ಶಾಸಕರು ಪ್ರತಿ­ಭಟನೆ ನಡೆಸುವಾಗ, ಮುಸ್ತಾಕ್ ಅವರು ಆಯತಪ್ಪಿ ಕುಸಿದು ಬಿದ್ದರು ಎಂದು ಮೂಲಗಳು ತಿಳಿಸಿವೆ.ಮುಸ್ತಾಕ್ ಅವರನ್ನು ಚಿಕಿತ್ಸೆಗಾಗಿ ಕೂಡಲೇ ಜಮ್ಮು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ­­ಯಿಂದಾಗಿ ಸ್ಪೀಕರ್ ಮುಬಾರಕ್ ಗುಲ್ ಅವರು ಅಧಿ­ವೇ­ಶನವನ್ನು ಬುಧವಾರಕ್ಕೆ ಮುಂದೂಡಿ­ದರು. ‘ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು­ಕೊಂಡು ಆಡಳಿತಾರೂಢ ಕಾಂಗ್ರೆಸ್‌, ನ್ಯಾಷ­ನಲ್ ಕಾನ್ಫ­ರೆನ್ಸ್‌ ಸಮ್ಮಿಶ್ರ ಸರ್ಕಾರ ಈ ರೀತಿಯ ಪಕ್ಷಪಾತದ ನಿರ್ಧಾರ ಕೈಗೊಂಡಿದೆ. ಇದು ರಾಜಕೀಯ ಪ್ರೇರಿತ­ವಾಗಿದೆ’ ಎಂದು ‘ಪಿಡಿಪಿ’ ಅಧ್ಯಕ್ಷೆ ಮುಫ್ತಿ ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.