ಕಾಸಿಗಾಗಿ ಸುದ್ದಿ- ದೇಶದಲ್ಲಿ 1400 ಪ್ರಕರಣಗಳು ಪತ್ತೆ

7

ಕಾಸಿಗಾಗಿ ಸುದ್ದಿ- ದೇಶದಲ್ಲಿ 1400 ಪ್ರಕರಣಗಳು ಪತ್ತೆ

Published:
Updated:

ನವದೆಹಲಿ (ಪಿಟಿಐ): ಕಳೆದ ನಾಲ್ಕು ವರ್ಷಗಳಲ್ಲಿ 17 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಬಳಿಕ ಚುನಾವಣಾ ಆಯೋಗವು ಒಟ್ಟು 1400 ಕಾಸಿಗಾಗಿ ಸುದ್ದಿ ಪ್ರಕರಣಗಳನ್ನು ಪತ್ತೆ ಮಾಡಿದೆ. ಕಳೆದ ವರ್ಷ ಪಂಜಾಬ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸಂಖ್ಯೆಯ, ಅಂದರೆ 523 ಕಾಸಿಗಾಗಿ ಸುದ್ದಿ ಪ್ರಕರಣಗಳು ಪತ್ತೆಯಾಗಿವೆ.ಗುಜರಾತ್‌ನಲ್ಲಿ 414, ಹಿಮಾಚಲ ಪ್ರದೇಶ-104, ಕರ್ನಾಟಕ-93, ಉತ್ತರಪ್ರದೇಶ-93, ಉತ್ತರಾಖಂಡ-30, ಗೋವಾ-9, ಕೇರಳ-65, ಅಸ್ಸಾಂ-27, ತಮಿಳುನಾಡು-22, ಪಶ್ಚಿಮ ಬಂಗಾಳ-8 ಮತ್ತು ಪುದುಚೇರಿಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.ಕಾಸಿಗಾಗಿ ಸುದ್ದಿ ಪ್ರಕರಣಗಳು ಪತ್ತೆಯಾದ ನಂತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಕಾರಣ ಕೇಳಿ ನೋಟಿಸ್‌ಜಾರಿ ಮಾಡಿದೆ.ಈ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ಪ್ರತ್ಯೇಕ ಘಟಕವನ್ನು ಆರಂಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry