ಕಿಂಗ್ಸ್ ಇಲೆವೆನ್ಗೆ ಸುಲಭ ಜಯ

ಚಂಡೀಗಡ (ಪಿಟಿಐ): ಡೆಲ್ಲಿ ಡೇರ್ ಡೆವಿಲ್ಸ್ ತಂಡ ಐಪಿಎಲ್ ಏಳನೇ ಆವೃತ್ತಿಯ ಟೂರ್ನಿಯಲ್ಲಿ ಸೋಲಿ ನೊಂದಿಗೆ ಅಭಿಯಾನ ಕೊನೆಗೊಳಿಸಿದೆ.
ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆವಿನ್ ಪೀಟರ್ಸ್ನ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೈಯಲ್ಲಿ ಏಳು ವಿಕೆಟ್ಗಳ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಡೇರ್ ಡೆವಿಲ್ಸ್ 18.1 ಓವರ್ಗಳಲ್ಲಿ 115 ರನ್ಗಳಿಗೆ ಆಲೌಟಾದರೆ, ಕಿಂಗ್ಸ್ ಇಲೆವೆನ್ ತಂಡ 13.5 ಓವರ್ಗಳಲ್ಲಿ 3 ವಿಕೆಟ್ಗೆ 119 ರನ್ ಗಳಿಸಿ ಜಯ ಸಾಧಿಸಿತು.
ಕಿಂಗ್ಸ್ ಇಲೆವೆನ್ಗೆ ಒಲಿದ 12ನೇ ಗೆಲುವು ಇದು. ಈ ತಂಡ 14 ಪಂದ್ಯಗಳಿಂದ 22 ಪಾಯಿಂಟ್ ಗಳಿಸುವ ಮೂಲಕ ತನ್ನ ಲೀಗ್ ವ್ಯವ ಹಾರ ಕೊನೆಗೊಳಿಸಿತು. 14 ಪಂದ್ಯ ಗಳಲ್ಲಿ 12ರಲ್ಲೂ ಸೋಲು ಅನುಭವಿಸಿ ರುವ ಡೇರ್ ಡೆವಿಲ್ಸ್ ಕೇವಲ ನಾಲ್ಕು ಪಾಯಿಂಟ್ಗಳೊಂದಿಗೆ ಕೊನೆಯ ಸ್ಥಾನ ಪಡೆಯಿತು.
ಪ್ರಭಾವಿ ಬೌಲಿಂಗ್: ಟಾಸ್ ಗೆದ್ದ ಜಾರ್ಜ್ ಬೇಲಿ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿದರು. ತಂಡದ ಬೌಲರ್ಗಳು ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪರ್ವಿಂದರ್ ಅವಾನಾ (15ಕ್ಕೆ 2), ಅಕ್ಷರ್ ಪಟೇಲ್ (28ಕ್ಕೆ 2), ಮಿಷೆಲ್ ಜಾನ್ಸನ್ (27ಕ್ಕೆ 2) ಮತ್ತು ಕರಣ್ವೀರ್ ಸಿಂಗ್ (22ಕ್ಕೆ 2) ಶಿಸ್ತಿನ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು.
ಕೆವಿನ್ ಪೀಟರ್ನಸ್ (58, 41 ಎಸೆತ, 9 ಬೌಂ) ಏಕಾಂಗಿ ಹೋರಾಟ ನಡೆಸಿದ ಕಾರಣ ತಂಡದ ಮೊತ್ತ 100 ರನ್ಗಳ ಗಡಿ ದಾಟಿತು. ಪೀಟರ್ಸನ್ ಅವರನ್ನು ಹೊರತುಪಡಿಸಿ ದಿನೇಶ್ ಕಾರ್ತಿಕ್ (13) ಮತ್ತು ಜಿಮ್ಮಿ ನೀಶಮ್ (12) ಮಾತ್ರ ಎರಡಂಕಿಯ ಮೊತ್ತ ತಲುಪಿದರು.
ಮಯಂಕ್ ಅಗರ್ವಾಲ್ (2) ವಿಕೆಟ್ ಪಡೆದ ಮಿಷೆಲ್ ಜಾನ್ಸನ್ ಡೆಲ್ಲಿ ತಂಡಕ್ಕೆ ಮೊದಲ ಆಘಾತ ನೀಡಿದರು. ಪೀಟರ್ಸನ್ ಮತ್ತು ಕಾರ್ತಿಕ್ ಎರಡನೇ ವಿಕೆಟ್ಗೆ 31 ರನ್ ಸೇರಿಸಿದರು. ಆರನೇ ಓವರ್ನಲ್ಲಿ ಕಾರ್ತಿಕ್ ಮತ್ತು ಕೇದಾರ್ ಜಾಧವ್ (0) ಅವರನ್ನು ಪೆವಿಲಿಯನ್ಗಟ್ಟಿದ ಅವಾನಾ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಆ ಬಳಿಕ ಚೇತರಿಸಿಕೊಳ್ಳಲು ಡೇರ್ಡೆವಿಲ್ಸ್ ವಿಫಲವಾಯಿತು.
14ನೇ ಓವರ್ವರೆಗೆ ಕ್ರೀಸ್ನಲ್ಲಿದ್ದ ಪೀಟರ್ಸನ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಇತರ ಬ್ಯಾಟ್ಸ್ಮನ್ಗಳಿಂದ ತಕ್ಕ ಬೆಂಬಲ ಲಭಿಸಲಿಲ್ಲ.
ಮಿಂಚಿದ ವೋಹ್ರಾ, ಮಿಲ್ಲರ್: ಸುಲಭ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆ ವೆನ್ ತಂಡದ ಆರಂಭ ಚೆನ್ನಾಗಿರಲಿಲ್ಲ. ವೀರೇಂದ್ರ ಸೆಹ್ವಾಗ್ (9) ಮತ್ತು ಅಮೋಘ ಫಾರ್ಮ್ನಲ್ಲಿರುವ ಗ್ಲೆನ್ ಮ್ಯಾಕ್ಸ್ವೆಲ್ (0) ಔಟಾದಾಗ ತಂಡದ ಮೊತ್ತ ಕೇವಲ 16. ಇವರಿಬ್ಬರು ಕ್ರಮವಾಗಿ ಮೊಹಮ್ಮದ್ ಶಮಿ ಹಾಗೂ ಜಯದೇವ್ ಉನದ್ಕತ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಮನನ್ ವೋಹ್ರಾ (47, 38 ಎಸೆತ, 4 ಬೌಂ, 2 ಸಿಕ್ಸರ್) ಮತ್ತು ಡೇವಿಡ್ ಮಿಲ್ಲರ್ (ಅಜೇಯ 47, 34 ಎಸೆತ, 4 ಬೌಂ, 2 ಸಿಕ್ಸರ್) ಮೂರನೇ ವಿಕೆಟ್ಗೆ 10 ಓವರ್ಗಳಲ್ಲಿ 96 ರನ್ಗಳ ಜೊತೆಯಾಟ ನೀಡಿ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು.
ಬಿರುಸಿನ ಆಟವಾಡಿದ ಮಿಲ್ಲರ್ ಎದುರಾಳಿ ತಂಡದ ಎಲ್ಲ ಬೌಲರ್ಗಳನ್ನು ಧೈರ್ಯದಿಂದ ಎದುರಿಸಿದರು. ವೋಹ್ರಾ ಕೂಡಾ ಆಕರ್ಷಕ ಹೊಡೆತಗಳ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.
ಸ್ಕೋರ್ ವಿವರ
ಡೆಲ್ಲಿ ಡೇರ್ಡೆವಿಲ್ಸ್: 18.1 ಓವರ್ಗಳಲ್ಲಿ 115
ಕೆವಿನ್ ಪೀಟರ್ಸನ್ ಎಲ್ಬಿಡಬ್ಲ್ಯು ಬಿ ರಿಷಿ ಧವನ್ 58
ಮಯಂಕ್ ಅಗರ್ವಾಲ್ ಸಿ ಸೆಹ್ವಾಗ್ ಬಿ ಮಿಷೆಲ್
ಜಾನ್ಸನ್ 02
ದಿನೇಶ್ ಕಾರ್ತಿಕ್ ಸಿ ಪಟೇಲ್ ಬಿ ಪರ್ವಿಂದರ್ ಅವಾನಾ 13
ಕೇದಾರ್ ಜಾಧವ್ ಸಿ ವೋಹ್ರಾ ಬಿ ಪರ್ವಿಂದರ್ ಅವಾನಾ 00
ಮನೋಜ್ ತಿವಾರಿ ರನೌಟ್ 08
ಜೀನ್ ಪಾಲ್ ಡುಮಿನಿ ಸಿ ಪಟೇಲ್ ಬಿ ಕರಣ್ವೀರ್ ಸಿಂಗ್ 08
ಜಿಮ್ಮಿ ನೀಶಮ್ ಸಿ ಬೇಲಿ ಬಿ ಕರಣ್ವೀರ್ ಸಿಂಗ್ 12
ಶಹಬಾಜ್ ನದೀಮ್ ಔಟಾಗದೆ 03
ಮೊಹಮ್ಮದ್ ಶಮಿ ಬಿ ಅಕ್ಷರ್ ಪಟೇಲ್ 00
ಇಮ್ರಾನ್ ತಾಹಿರ್ ಸಿ ಧವನ್ ಬಿ ಅಕ್ಷರ್ ಪಟೇಲ್ 04
ಜಯದೇವ್ ಉನದ್ಕತ್ ಸಿ ಮ್ಯಾಕ್ಸ್ವೆಲ್ ಬಿ
ಮಿಷೆಲ್ ಜಾನ್ಸನ್ 00
ಇತರೆ: (ಲೆಗ್ಬೈ-1, ವೈಡ್-6) 07
ವಿಕೆಟ್ ಪತನ: 1-13 (ಅಗರ್ವಾಲ್; 2.2), 2-44 (ಕಾರ್ತಿಕ್; 5.2), 3-44 (ಜಾಧವ್; 5.6), 4-67 (ತಿವಾರಿ; 9.3), 5-91 (ಡುಮಿನಿ; 12.3), 6-93 (ಪೀಟರ್ಸನ್; 13.4), 7-110 (ನೀಶಮ್; 16.6), 8-111 (ಶಮಿ; 17.2), 9-115 (ತಾಹಿರ್; 17.6), 10-115 (ಉನದ್ಕತ್; 18.1)
ಬೌಲಿಂಗ್: ಪರ್ವಿಂದರ್ ಅವಾನಾ 3-1-15-2, ಅಕ್ಷರ್ ಪಟೇಲ್ 4-0-28-2, ಮಿಷೆಲ್ ಜಾನ್ಸನ್ 3.1-0-27-2, ಕರಣ್ವೀರ್ ಸಿಂಗ್ 4-0-22-2, ರಿಷಿ ಧವನ್ 4-0-22-1
ಕಿಂಗ್ಸ್ ಇಲೆವೆನ್ ಪಂಜಾಬ್ 13.5 ಓವರ್ಗಳಲ್ಲಿ
3 ವಿಕೆಟ್ಗೆ 119
ವೀರೇಂದ್ರ ಸೆಹ್ವಾಗ್ ಸಿ ಕಾರ್ತಿಕ್ ಬಿ ಮೊಹಮ್ಮದ್ ಶಮಿ 09
ಮನನ್ ವೋಹ್ರಾ ಬಿ ಇಮ್ರಾನ್ ತಾಹಿರ್ 47
ಗ್ಲೆನ್ ಮ್ಯಾಕ್ಸ್ವೆಲ್ ಸಿ ಪೀಟರ್ಸನ್ ಬಿ
ಜಯದೇವ್ ಉನದ್ಕತ್ 00
ಡೇವಿಡ್ ಮಿಲ್ಲರ್ ಔಟಾಗದೆ 47
ಜಾರ್ಜ್ ಬೇಲಿ ಔಟಾಗದೆ 01
ಇತರೆ: (ಲೆಗ್ಬೈ-5, ವೈಡ್-10) 15
ವಿಕೆಟ್ ಪತನ: 1-13 (ಸೆಹ್ವಾಗ್; 2.2), 2-16 (ಮ್ಯಾಕ್ಸ್ವೆಲ್; 3.2), 3-112 (ವೋಹ್ರಾ; 13.2)
ಬೌಲಿಂಗ್: ಮೊಹಮ್ಮದ್ ಶಮಿ 3-0-26-1, ಜಯದೇವ್ ಉನದ್ಕತ್ 2-0-3-1, ಜಿಮ್ಮಿ ನೀಶಮ್ 1-0-14-0, ಜೀನ್ ಪಾಲ್ ಡುಮಿನಿ 2-0-15-0, ಇಮ್ರಾನ್ ತಾಹಿರ್ 3.5-0-32-1, ಶಹಬಾಜ್ ನದೀಮ್ 2-0-24-0
ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್ಗೆ 7 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ಮನನ್ ವೋಹ್ರಾ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.