ಕಿಂಗ್ಸ್ ಇಲೆವೆನ್‌ಗೆ ರೋಚಕ ವಿಜಯ

7

ಕಿಂಗ್ಸ್ ಇಲೆವೆನ್‌ಗೆ ರೋಚಕ ವಿಜಯ

Published:
Updated:
ಕಿಂಗ್ಸ್ ಇಲೆವೆನ್‌ಗೆ ರೋಚಕ ವಿಜಯ

ಮೊಹಾಲಿ (ಪಿಟಿಐ): ಇನ್ನೇನು ಗೆಲುವು ಬೆರಳ ತುದಿಯಲ್ಲಿ ಎನ್ನುವ ಸಂಭ್ರಮದಲ್ಲಿತ್ತು ಡೆಕ್ಕನ್ ಚಾರ್ಜರ್ಸ್. ಆದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಡೇವಿಡ್ ಹಸ್ಸಿ (ಅಜೇಯ 65, 35ಎಸೆತ, 4ಬೌಂಡರಿ, 5ಸಿಕ್ಸರ್) ಇದಕ್ಕೆ ಅವಕಾಶ ನೀಡಲಿಲ್ಲ.ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುಮಾರ ಸಂಗಕ್ಕಾರ ಬಳಗ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 190 ರನ್ ಪೇರಿಸಿತು. ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಮುಟ್ಟಿತು. ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಆಗ ಗುರುಕೀರತ್ ಸಿಂಗ್ (ಅಜೇಯ 29, 12ಎಸೆತ, 4ಬೌಂಡರಿ, 1ಸಿಕ್ಸರ್) ಚೆಂಡನ್ನು ಬೌಂಡರಿಗೆ ಅಟ್ಟಿ ಕಿಂಗ್ಸ್ ಇಲೆವೆನ್ ಸಂಭ್ರಮಕ್ಕೆ ಕಾರಣರಾದರು.ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಚಾರ್ಜರ್ಸ್ ಧವನ್ (71, 50 ಎಸೆತ, 4 ಬೌಂ, 3 ಸಿಕ್ಸರ್) ಮತ್ತು ಕ್ಯಾಮರೂನ್ ವೈಟ್ (ಅಜೇಯ 67, 41 ಎಸೆತ, 8 ಬೌಂ, 1 ಸಿಕ್ಸರ್) ಆಕರ್ಷಕ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಗಳಿಸಿತು.ಧವನ್ ಮತ್ತು ಪಾರ್ಥಿವ್ ಪಟೇಲ್ (18) ಮೊದಲ ವಿಕೆಟ್‌ಗೆ ಆರು ಓವರ್‌ಗಳಲ್ಲಿ 47 ರನ್ ಸೇರಿಸಿದರು. ಸಂಗಕ್ಕಾರ (1) ಬೇಗನೇ ಔಟಾದರು.

ಸ್ಕೋರ್ ವಿವರ:

ಡೆಕ್ಕನ್ ಚಾರ್ಜರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 190

ಶಿಖರ್ ಧವನ್ ಸಿ ಅವಾನಾ ಬಿ ಪ್ರವೀಣ್ ಕುಮಾರ್  71

ಪಾರ್ಥಿವ್ ಪಟೇಲ್ ಸಿ ಗುರುಕೀರತ್ ಬಿ ಅಜರ್ ಮಹಮೂದ್ 18

ಕುಮಾರ ಸಂಗಕ್ಕಾರ ಸಿ ಅಜರ್ ಬಿ ಪರ್ವಿಂದರ್ ಅವಾನಾ  01

ಕ್ಯಾಮರೂನ್ ವೈಟ್ ಔಟಾಗದೆ  67

ಡೇನಿಯಲ್ ಕ್ರಿಸ್ಟಿಯನ್ ಸಿ ಹ್ಯಾರಿಸ್ ಬಿ ಅಜರ್ ಮಹಮೂದ್ 24

ಆಶೀಶ್ ರೆಡ್ಡಿ ಔಟಾಗದೆ  00

ಇತರೆ: (ಲೆಗ್‌ಬೈ-6, ವೈಡ್-2, ನೋಬಾಲ್-1) 09

ವಿಕೆಟ್ ಪತನ: 1-47 (ಪಟೇಲ್; 5.6), 2-49 (ಸಂಗಕ್ಕಾರ; 6.6), 3-145 (ಧವನ್; 16.6), 4-189 (ಕ್ರಿಸ್ಟಿಯನ್; 19.5)

ಬೌಲಿಂಗ್: ಪ್ರವೀಣ್ ಕುಮಾರ್ 4-0-31-1, ಡೇವಿಡ್ ಹಸ್ಸಿ 1-0-15-0, ರ‌್ಯಾನ್ ಹ್ಯಾರಿಸ್ 4-0-32-0, ಪರ್ವಿಂದರ್ ಅವಾನಾ 4-0-41-0, ಅಜರ್ ಮಹಮೂದ್ 4-0-39-2, ಪಿಯೂಷ್ ಚಾವ್ಲಾ 3-0-27-0

ಕಿಂಗ್ಸ್ ಇಲೆವನ್ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 194

ನಿತಿನ್ ಸೈನಿ ಸಿ ಸಂಗಕ್ಕಾರ ಬಿ ಕ್ರಿಸ್ಟಿಯನ್  03

ಮನ್‌ದೀಪ್ ಸಿಂಗ್ ಸಿ ಕ್ರಿಸ್ಟಿಯನ್ ಬಿ ಮನ್‌ಪ್ರೀತ್ ಗೋನಿ  28

ಶಾನ್ ಮಾರ್ಷ್ ಸಿ ಸಂಗಕ್ಕಾರ ಬಿ ಕ್ರಿಸ್ಟಿಯನ್  11

ಮಹಮೂದ್ ಸ್ಟಂಪ್ಡ್ ಪಾರ್ಥಿವ್ ಪಟೇಲ್ ಬಿ ಮಿಶ್ರಾ  31

ಡೇವಿಡ್ ಹಸ್ಸಿ ಔಟಾಗದೆ  65

ಸಿದ್ಧಾರ್ಥ ಚಿಟ್ನಿಸ್ ಸಿ ಪಾರ್ಥಿವ್ ಪಟೇಲ್ ಬಿ ಡೇಲ್ ಸ್ಟೈನ್  11

ಪಿಯೂಷ್ ಚಾವ್ಲಾ ಸಿ. ಕ್ಯಾಮರೂನ್ ವೈಟ್ ಬಿ ಡೇಲ್ ಸ್ಟೈನ್ 08

ಗುರುಕೀರತ್ ಸಿಂಗ್ ಔಟಾಗದೆ  29

ಇತರೆ: (ಲೆಗ್ ಬೈ-6, ವೈಡ್-2)  08

ವಿಕೆಟ್ ಪತನ: 1-7 (ಸೈನಿ; 2.2), 2-26 (ಮಾರ್ಷ್; 4.4), 3-56 (ಮನ್‌ದೀಪ್; 7.2), 4-100 (ಅಜರ್; 12.2), 5-141 (ಚಿಟ್ನಿಸ್; 16.1), 6-149 (ಚಾವ್ಲಾ; 16.4).

ಬೌಲಿಂಗ್: ಡೇಲ್ ಸ್ಟೈನ್ 4-0-26-2, ಟಿ.ಪಿ. ಸುಧೀಂದ್ರ 4-0-47-0, ಡೇನಿಯಲ್ ಕ್ರಿಸ್ಟಿಯನ್ 4-0-31-2, ಅಭಿಷೇಕ್ ಜುಂಜನ್‌ವಾಲಾ 1-0-13-0, ಮನ್‌ಪ್ರೀತ್ ಗೋನಿ 4-0-40-1, ಅಮಿತ್ ಮಿಶ್ರಾ 3-0-31-1.

ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 4 ವಿಕೆಟ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಡೇವಿಡ್ ಹಸ್ಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry