ಕಿಂಗ್ಸ್ ಇಲೆವೆನ್‌ಗೆ ಸುಲಭ ವಿಜಯ

7

ಕಿಂಗ್ಸ್ ಇಲೆವೆನ್‌ಗೆ ಸುಲಭ ವಿಜಯ

Published:
Updated:
ಕಿಂಗ್ಸ್ ಇಲೆವೆನ್‌ಗೆ ಸುಲಭ ವಿಜಯ

ಹೈದರಾಬಾದ್ (ಪಿಟಿಐ): ನಾಲ್ಕು ವಿಕೆಟ್ ಕಬಳಿಸಿ ಬೌಲಿಂಗ್‌ನಲ್ಲಿ ಮಿಂಚಿದ್ದ ಪಾಲ್ ವಲ್ತಾಟಿ ಬ್ಯಾಟಿಂಗ್‌ನಲ್ಲಿಯೂ (75; 47 ಎ., 8 ಬೌಂಡರಿ, 5 ಸಿಕ್ಸರ್) ಪ್ರಭಾವಿಯಾದರು. ಅವರಿಗೆ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ (61; 46 ಎ., 5 ಬೌಂಡರಿ, 3 ಸಿಕ್ಸರ್) ಅವರ ಬೆಂಬಲವೂ ದೊರೆಯಿತು. ಇಂಥ ಉಪಯುಕ್ತ ಆಟದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಡೆಕ್ಕನ್  ಚಾರ್ಜರ್ಸ್ ಹೈದರಾಬಾದ್ ತಂಡ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ವಿಜಯ ಸಾಧಿಸಿದರು.ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಚಾರ್ಜರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 165 ರನ್ ಪೇರಿಸಿತು. ಗೆಲುವಿಗೆ 166 ರನ್‌ಗಳ ಗುರಿ ಬೆನ್ನಟ್ಟಿದ ಪಂಜಾಬ್ 17.4 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು.ಇದಕ್ಕೂ ಮುನ್ನ ಟಾಸ್ ಸೋತರೂ ಕುಮಾರ ಸಂಗಕ್ಕಾರ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ವೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಶಿಖರ್ ಧವನ್ ‘ಟಾಪ್ ಸ್ಕೋರರ್’ ಎನಿಸಿದರು. ಸಂಗಕ್ಕಾರ (35, 28 ಎಸೆತ, 5 ಬೌಂ) ಹಾಗೂ ಕೊನೆಯಲ್ಲಿ ಕ್ರಿಸ್ಟಿಯನ್ (30, 14 ಎಸೆತ, 2ಬೌಂ, 2 ಸಿಕ್ಸರ್) ಅವರು ಪ್ರಭಾವಿ ಆಟವಾಡಿದರು.ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿದ್ದ ಪಾಲ್ ವಲ್ತಾಟಿ ಈ ಬಾರಿ ಕಿಂಗ್ಸ್ ಇಲೆವೆನ್ ಪರ ಬೌಲಿಂಗ್‌ನಲ್ಲಿ ಮಿಂಚಿದರು. 29 ರನ್‌ಗಳಿಗೆ 4 ವಿಕೆಟ್ ಪಡೆದ ಅವರು ಚಾರ್ಜರ್ಸ್ ತಂಡ ದೊಡ್ಡ ಮೊತ್ತ ಗಳಿಸದಂತೆ ನೋಡಿಕೊಂಡರು. ರ್ಯಾನ್ ಮೆಕ್‌ಲಾರೆನ್ 33 ರನ್ ನೀಡಿ ಎರಡು ವಿಕೆಟ್ ಪಡೆದರು. ಚಾರ್ಜರ್ಸ್ ತಂಡ ಸನ್ನಿ ಸೋಹಲ್ (7) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಶಿಖರ್ ಧವನ್ ಮತ್ತು ನಾಯಕ ಸಂಗಕ್ಕಾರ ಎರಡನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದರು. ಇದರಿಂದ ತಂಡ ಆರಂಭಿಕ ಆಘಾತದಿಂದ ಪಾರಾಯಿತು. ಕಳೆದ ಪಂದ್ಯದ ಹೀರೊ ಭರತ್ ಚಿಪ್ಲಿ (14) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ವಲ್ತಾಟಿ ಎಸೆತದಲ್ಲಿ ಮಾರ್ಷ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಜೆಪಿ ಡುಮಿನಿ ಉತ್ತಮ ಆರಂಭ ಪಡೆದರೂ ಅದರ ಲಾಭ ತಂಡಕ್ಕೆ ಸಿಗಲಿಲ್ಲ.ಸ್ಕೋರು ವಿವರ

ಡೆಕ್ಕನ್ ಚಾರ್ಜರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 165

ಸನ್ನಿ ಸೋಹಲ್ ಸಿ ಕಾರ್ತಿಕ್ ಬಿ ರ್ಯಾನ್ ಹ್ಯಾರಿಸ್  07

ಶಿಖರ್ ಧವನ್ ಸಿ ಸನ್ನಿ ಸಿಂಗ್ ಬಿ ಪಾಲ್ ವಲ್ತಾಟಿ  45

ಕುಮಾರ ಸಂಗಕ್ಕಾರ ಸಿ ಮೆಕ್‌ಲಾರೆನ್ ಬಿ ಪಿಯೂಷ್ ಚಾವ್ಲಾ 35

ಜೆಪಿ ಡುಮಿನಿ ಸಿ ಮತ್ತು ಬಿ ರ್ಯಾನ್ ಮೆಕ್‌ಲಾರೆನ್  18

ಭರತ್ ಚಿಪ್ಲಿ ಸಿ ಮಾರ್ಷ್ ಬಿ ಪಾಲ್ ವಲ್ತಾಟಿ  14

ಡೇನಿಯಲ್ ಕ್ರಿಸ್ಟಿಯನ್ ಬಿ ಪಾಲ್ ವಲ್ತಾಟಿ  30

ಮನ್‌ಪ್ರೀತ್ ಗೋನಿ ಬಿ ರ್ಯಾನ್ ಮೆಕ್‌ಲಾರೆನ್  00

ರವಿ ತೇಜ ಔಟಾಗದೆ  10

ಅಮಿತ್ ಮಿಶ್ರಾ ಎಲ್‌ಬಿಡಬ್ಲ್ಯು ಬಿ ವಲ್ತಾಟಿ  00

ಡೆಲ್ ಸ್ಟೇನ್ ಔಟಾಗದೆ  01

ಇತರೆ: (ಲೆಗ್‌ಬೈ-3, ವೈಡ್-1, ನೋಬಾಲ್-1) 05

ವಿಕೆಟ್ ಪತನ: 1-13 (ಸೋಹಲ್; 1.6), 2-88 (ಸಂಗಕ್ಕಾರ; 10.6), 3-91 (ಧವನ್; 11.5), 4-112 (ಚಿಪ್ಲಿ; 14.4), 5-129 (ಡುಮಿನಿ; 17.1), 6-137 (ಗೋನಿ; 17.3), 7-156 (ಕ್ರಿಸ್ಟಿಯನ್; 18.5), 8-156 (ಮಿಶ್ರಾ; 18.6).

ಬೌಲಿಂಗ್: ಪ್ರವೀಣ್ ಕುಮಾರ್ 4-0-29-0, ರ್ಯಾನ್ ಹ್ಯಾರಿಸ್ 4-0-31-1, ರ್ಯಾನ್ ಮೆಕ್‌ಲಾರೆನ್ 3-0-33-2, ವಿಕ್ರಮ್‌ಜೀತ್ ಮಲಿಕ್ 2-0-13-0, ಅಭಿಷೇಕ್ ನಾಯರ್ 1-0-10-0, ಪಿಯೂಷ್ ಚಾವ್ಲಾ 2-0-17-1, ಪಾಲ್ ವಲ್ತಾಟಿ 4-0-29-4

ಕಿಂಗ್ಸ್ ಇಲೆವೆನ್ ಪಂಜಾಬ್: 17.4 ಓವರುಗಳಲ್ಲಿ

2 ವಿಕೆಟ್‌ಗಳ ನಷ್ಟಕ್ಕೆ 166

ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ರವಿ ತೇಜ ಬಿ ಅಮಿತ್ ಮಿಶ್ರಾ  61

ಪಾಲ್ ವಲ್ತಾಟಿ ಸಿ ಇಶಾಂತ್ ಶರ್ಮ ಬಿ ಅಮಿತ್ ಮಿಶ್ರಾ  75

ಅಭಿಷೇಕ್ ನಾಯರ್ ಔಟಾಗದೆ  13

ದಿನೇಶ್ ಕಾರ್ತಿಕ್ ಔಟಾಗದೆ  03

ಇತರೆ: (ಲೆಗ್‌ಬೈ-7, ವೈಡ್-5, ನೋಬಾಲ್-2)  14

ವಿಕೆಟ್ ಪತನ: 1-136 (ಆ್ಯಡಮ್ ಗಿಲ್‌ಕ್ರಿಸ್ಟ್; 13.6), 2-151 (ಪಾಲ್ ವಲ್ತಾಟಿ; 15.6).

ಬೌಲಿಂಗ್: ಡೆಲ್ ಸ್ಟೇನ್ 3-0-24-0 (ನೋಬಾಲ್-1, ವೈಡ್-1), ಇಶಾಂತ್ ಶರ್ಮ 4-0-23-09 (ನೋಬಾಲ್-1, ವೈಡ್-1), ಮನ್‌ಪ್ರೀತ್ ಗೋಣಿ 2-0-35-0 (ವೈಡ್-1), ಅಮಿತ್ ಮಿಶ್ರಾ 4-0-28-2, ಡೇನಿಯಲ್ ಕ್ರಿಸ್ಟಿಯನ್ 2.4-0-28-0, ಜೆನ್ ಪಾಲ್ ಡುಮಿನಿ 2-0-21-0 (ವೈಡ್-2).   ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 8 ವಿಕೆಟ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಪಾಲ್ ವಲ್ತಾಟಿ (ಕಿಂಗ್ಸ್ ಇಲೆವೆನ್ ಪಂಜಾಬ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry