ಮಂಗಳವಾರ, ಮೇ 11, 2021
19 °C

ಕಿಂಗ್ಸ್ ಇಲೆವೆನ್ ಸೇಡಿನ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಪಿಟಿಐ): ಪುಣೆ ವಾರಿಯರ್ಸ್ ವಿರುದ್ಧ ಪುಣೆಯಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಗುರುವಾರದ ಪಂದ್ಯ ಒಂದು ಅವಕಾಶ.ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆಗೊಂಡ ಕಿಂಗ್ಸ್ ಇಲೆವೆನ್ ಗೆಲುವಿನ ಸಿಹಿ ಸವಿಯಲು ಕಾತರದಿಂದ ಕಾಯ್ದಿದೆ.ಸ್ವಂತ ನೆಲದಲ್ಲಿ ಮೊದಲ ಪಂದ್ಯ ಆಡಲಿರುವ ಅದು  ಜಯದೊಂದಿಗೆ ಸ್ಥಳೀಯ ಬೆಂಬಲಿಗರನ್ನು ಸಂತೋಷ ಪಡಿಸುವ ಆಶಯವನ್ನಂತೂ ಹೊಂದಿದೆ. ಆದರೆ ಈ ಉದ್ದೇಶ ಸುಲಭದಲ್ಲಿ ಈಡೇರುತ್ತದೆಂದು ಹೇಳಲಾಗದು. ಏಕೆಂದರೆ ಸೌರವ್ ಗಂಗೂಲಿ ನಾಯಕತ್ವದಲ್ಲಿ ಪುಣೆ ವಾರಿಯರ್ಸ್ ಸತತ ಎರಡು ಪಂದ್ಯಗಳನ್ನು ಗೆದ್ದು ವಿಶ್ವಾಸದಿಂದ ಬೀಗುತ್ತಿದೆ.ಪಂದ್ಯ ಆರಂಭ: ರಾತ್ರಿ 8.00ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.