ಕಿಂಗ್‌ಫಿಷರ್‌ಗೆ ಮರುಜೀವ?

7

ಕಿಂಗ್‌ಫಿಷರ್‌ಗೆ ಮರುಜೀವ?

Published:
Updated:

ನವದೆಹಲಿ (ಪಿಟಿಐ): ವಿಮಾನ ಹಾರಾಟ ಸ್ಥಗಿತಗೊಂಡ ಮೂರು ತಿಂಗಳ ಬಳಿಕ ಕಿಂಗ್‌ಫಿಷರ್ ಏರ್‌ಲೈನ್ಸ್ , ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಕ್ಕೆ ಪುನಶ್ಚೇತನ ಯೋಜನೆಯನ್ನು ಸೋಮವಾರ ಸಲ್ಲಿಸಿದೆ. ಈ ಮೂಲಕ ಅದು ಕೆಲ ವಿಮಾನಗಳ ಹಾರಾಟಕ್ಕೆ ಯೋಚಿಸಿದೆ.`ಸ್ಥಗಿತಗೊಂಡಿರುವ ವಿಮಾನ ಹಾರಾಟ ಪುನರಾರಂಭಿಸಲು ಪುನಶ್ಚೇತನ ಯೋಜನೆ ಸಲ್ಲಿಸುವಂತೆ ಪೂರ್ವ ಷರತ್ತು ಹಾಕಲಾಗಿತ್ತು. ಕಿಂಗ್‌ಫಿಷರ್ ಏರ್‌ಲೈನ್ಸ್ ಅದರಂತೆಯೇ ಪುನಶ್ಚೇತನ ಯೋಜನೆ ಸಲ್ಲಿಸಿದೆ' ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಿಂಗ್‌ಫಿಷರ್ ವಿಮಾನ ಹಾರಾಟ ಪರವಾನಗಿ ಇದೇ 31ರಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ನವೀಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಫಿಷರ್ ಕೆಲ ವಾರಗಳ ಹಿಂದೆ ಅರ್ಜಿ ಸಲ್ಲಿಸಿದೆ. ಕಿಂಗ್‌ಫಿಷರ್ ಪರವಾನಗಿಯನ್ನು ಡಿಜಿಸಿಎ ಅಕ್ಟೋಬರ್ 20ರಂದು ರದ್ದುಗೊಳಿಸಿತ್ತು.ವಿಮಾನ ಹಾರಾಟ ಪುನಶ್ಚೇತನ ಯೋಜನೆ ಮತ್ತು ವಿಸ್ತೃತ ಆರ್ಥಿಕ ಸ್ಥಿತಿ ಕುರಿತು ವರದಿ ಸಲ್ಲಿಸುವವರೆಗೆ ಪರವಾನಗಿ ನವೀಕರಣ ಅಸಾಧ್ಯ ಎಂದು ಡಿಜಿಸಿಎ ಅಧಿಕಾರಿಗಳು ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry