ಭಾನುವಾರ, ಜೂನ್ 20, 2021
20 °C

ಕಿಂಗ್‌ಫಿಷರ್ ಬಿಕ್ಕಟ್ಟು: ಅಜಿತ್- ಮಲ್ಯ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆರ್ಥಿಕ ಮುಗ್ಗಟ್ಟಿನಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಲೈಸೆನ್ಸ್ ರ್ದ್ದದತಿಗೆ ವಿಮಾನಯಾನ ನಿರ್ದೇಶನಾಲಯದ ಮಹಾ ನಿರ್ದೇಶಕರು (ಡಿಜಿಸಿಎ) ಚಿಂತಿಸುತ್ತಿರುವಾಗಲೇ ಬುಧವಾರ ಸಂಸ್ಥೆಯ ಮಾಲೀಕ ವಿಜಯ ಮಲ್ಯ ಅವರು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನು ವಿವರಿಸಿದರು.ಇಬ್ಬರೂ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರೂ, ಮಾಧ್ಯಮಗಳೊಡನೆ ಮಾತನಾಡಲಿಲ್ಲ. ಮಲ್ಯ ಅವರು ಸಂಸ್ಥೆಯ ಪ್ರಸಕ್ತ ಹಣಕಾಸು ಬಿಕ್ಕಟ್ಟು ಮತ್ತು ಕಾರ್ಯನಿರ್ವಹಣಾ ಸ್ಥಿತಿಗತಿಗಳ ಬಗ್ಗೆ ಸಚಿವರಿಗೆ ವಿವರಿಸಿರುವುದಾಗಿ ತಿಳಿದುಬಂದಿದೆ.ಹಣಕಾಸಿನ ದಿವಾಳಿಯ ಹೆಸರಿನಲ್ಲಿ ವಿಮಾನಗಳ ಸುರಕ್ಷತೆಯನ್ನು ಕಡೆಗಣಿಸಿದಲ್ಲಿ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಲು ಸಚಿವರು ಬಯಸಿದ್ದಾರೆ ಎನ್ನಲಾಗಿದೆ. ಆದರೆ ಡಿಜಿಸಿಎ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ಈ ಭೇಟಿಗೂ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು.ಸಂಸ್ಥೆಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ವಿಮಾನಯಾನ ನಿಯಂತ್ರಕರ ವರದಿಯನ್ನು ಕಾಯುತ್ತಿರುವುದಾಗಿ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕೆಂದಿದ್ದಲ್ಲಿ ಸಂಸ್ಥೆಯನ್ನು ಸರ್ಕಾರ ರಕ್ಷಿಸುವುದಿಲ್ಲ ಎಂದು ಹೇಳಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.