ಶುಕ್ರವಾರ, ನವೆಂಬರ್ 22, 2019
20 °C
ಆಡಳಿತಾತ್ಮಕ ಮಂಜೂರಿಗೆ ಮನವಿ

ಕಿಂಗ್‌ಫಿಷರ್ ವಿಮಾನ ಹಾರಾಟ ಪುನರಾರಂಭಕ್ಕೆ ಸಿದ್ಧತೆ

Published:
Updated:

ನವದೆಹಲಿ (ಪಿಟಿಐ): ವಿಮಾನ ಹಾರಾಟ ಪುನರಾರಂಭಿಸಲು ಆಡಳಿತಾತ್ಮಕ ಮಂಜೂರು ನೀಡಬೇಕೆಂದು ಕಿಂಗ್‌ಫಿಷರ್ ಏರ್‌ಲೈನ್ಸ್ ಬುಧವಾರ ವಿಮಾನಯಾನ ಮಹಾನಿರ್ದೇಶನಾಲಯವನ್ನು (ಡಿಜಿಸಿಎ) ಕೋರಿದೆ.`ಹಣಕಾಸು ಮತ್ತು ಸಂಚಾರ ಯೋಜನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಮತ್ತೆ ವಿಮಾನ ಹಾರಾಟಕ್ಕಾಗಿ ಯುಬಿ ಸಮೂಹ ಹಣ ನೀಡಲಿದೆ. ವಿಮಾನ ಹಾರಾಟದ ಪರವಾನಗಿ ನವೀಕರಣ ಮಾಡುವಂತೆಯೂ ಇದೇ ಸಂದರ್ಭದಲ್ಲಿ ಕೋರಿದ್ದೇವೆ' ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ಜತೆ ನಡೆಸಿದ ಸಭೆ ಬಳಿಕ ಕಿಂಗ್‌ಫಿಷರ್ ಏರ್‌ಲೈನ್ಸ್ ಸಿಇಒ ಸಂಜಯ ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು.ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರುವ ಮುನ್ನ ಕಿಂಗ್‌ಫಿಷರ್ ಸಲ್ಲಿಸಿದ ಯೋಜನೆಯನ್ನು ವಿಸ್ತೃತವಾಗಿ ಪರಿಶೀಲಿಸಲಾಗುವುದು ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಕಿಂಗ್‌ಫಿಷರ್ ಐದು ಏರ್‌ಬಸ್ ಎ-320 ಮತ್ತು ಎರಡು ಟರ್ಬೊಪ್ರಾಪ್ ಎಟಿಆರ್ ಏರ್‌ಕ್ರಾಫ್ಟ್ ಸೇವೆ ಶೀಘ್ರದಲ್ಲೇ ಆರಂಭಿಸಲಿದೆ. ಬಳಿಕ ಹಂತ ಹಂತವಾಗಿ ಈ ಸಂಖ್ಯೆ 20ಕ್ಕೆ ಹೆಚ್ಚಲಿದೆ.ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ತಿಂಗಳ ಹಿಂದೆ ನಡೆದ ಸಭೆಯಲ್ಲಿ ಡಿಜಿಸಿಎ ಸೂಚಿಸಿತ್ತು. ಕಿಂಗ್‌ಫಿಷರ್ ವಿಮಾನಗಳ ಹಾರಾಟ ಪರವಾನಗಿಯನ್ನು ಡಿಜಿಸಿಎ ಕಳೆದ ಅಕ್ಟೋಬರ್‌ನಲ್ಲಿ ರದ್ದುಪಡಿಸಿತ್ತು.

 

ಪ್ರತಿಕ್ರಿಯಿಸಿ (+)