ಕಿಂಗ್‌ಫಿಷರ್ ಸಂಡೆ ಸಂತೆ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಿಂಗ್‌ಫಿಷರ್ ಸಂಡೆ ಸಂತೆ

Published:
Updated:

ಕಿಂಗ್‌ಫಿಷರ್ ಪ್ರೀಮಿಯಂ ಆಯೋಜಿಸಿರುವ `ಸಂಡೆ ಸೋಲ್ ಸಂತೆ~ಯ 4ನೇ ಆವೃತ್ತಿ ಭಾನುವಾರ ನಡೆಯಲಿದೆ.ಇದು ಮಧ್ಯಾಹ್ನದಿಂದ ಮಧ್ಯರಾತ್ರಿ ವರೆಗೆ ನಡೆವ ಮೋಜಿನ ಸಂತೆ. ಜನಪದ, ಸಮಕಾಲೀನತೆ, ಆಧುನಿಕತೆ ಎಲ್ಲ ಹಿತವಾಗಿ ಮಿಳಿತಗೊಂಡು ರೂಪುತಳೆದಿರುವ ಒಂದು ದೊಡ್ಡ ಜಾತ್ರೆಯ ನೆನಪಿಸುತ್ತದೆ. ಇದರಲ್ಲಿ ಕಲೆ, ಕರಕುಶಲ ಮೇಳ, ಸಂಗೀತ, ಫ್ಯಾಷನ್ ಎಲ್ಲವೂ ಇದೆ. ಎಲ್ಲ ವಯೋಮಾನದವರಿಗೂ ಮುದ ನೀಡುವ ಈ ಸಂತೆ ಹಲವು ಸಂಸ್ಕೃತಿಗಳ ಮಿಶ್ರಣ.ಸಂತೆಗೆ ಬಂದವರೆಲ್ಲ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂತಸದಿಂದ ಕಾಲ ಕಳೆಯುವಂತೆ ಮಾಡುವುದೇ ಇದರ ಹಿಂದಿನ ಉದ್ದೇಶ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಸಂತೆಯಲ್ಲಿ ರೋಮಾಂಚನ ಉಂಟು ಮಾಡುವಂತಹ ಫ್ಯಾಷನ್ ಶೋ ನಡೆಸಿಕೊಡಲಿದ್ದಾರೆ. ಬೈಸಿಕಲ್ ಡೇಸ್ ಹಾಗೂ ಸೈಕೊಫೋನಿಕ್ ತಂಡವರು ನೀಡುವ ಸಂಗೀತ ಕಾರ್ಯಕ್ರಮ ಮಿಂಚಿನ ಸಂಚಾರ ಉಂಟುಮಾಡಲಿದೆ. ಡಿ.ಜೆ. ಐವಾನ್ ನೀಡುವ ಸ್ಟೇಜ್ ಶೋನೊಂದಿಗೆ ಸಂತೆಗೆ ತೆರೆಬೀಳಲಿದೆ.ವಯಸ್ಕರಿಗೆ ರೂ.49 ಪ್ರವೇಶ ಶುಲ್ಕ. 12 ವರ್ಷ ಒಳಗಿನ ಮಕ್ಕಳು ಹಾಗೂ ಹಿರಿಯರಿಗೆ ಪ್ರವೇಶ ಉಚಿತ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry