ಕಿಂಗ್‌ಫಿಷರ್ ಸಭೆ ಇಂದು

7

ಕಿಂಗ್‌ಫಿಷರ್ ಸಭೆ ಇಂದು

Published:
Updated:

ನವದೆಹಲಿ (ಪಿಟಿಐ): ಕಿಂಗ್‌ಫಿಷರ್ ಏರ್‌ಲೈನ್ಸ್ ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಬಿಕ್ಕಟ್ಟು 16 ದಿನವಾದರೂ ಬಗೆಹರಿಯದ ಕಾರಣ ಬುಧವಾರ ನೌಕರರ ಸಂಘದ ಪ್ರಮುಖರ ಜತೆ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗಿದೆ. ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಸಂಸ್ಥೆ ಅಧ್ಯಕ್ಷ ವಿಜಯ ಮಲ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಅಪಘಾತ: 17 ಸಾವು

ಛಾತ್ರಪುರ/ಮಧ್ಯಪ್ರದೇಶ (ಪಿಟಿಐ): ಬಸ್ ಮತ್ತು ಟ್ರಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಮೃತಪಟ್ಟು, 24ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ  ನಗೌಂನ್ ನವೋದಯ ವಿದ್ಯಾಲಯದ ಸಮೀಪ ಮಂಗಳವಾರ ಸಂಭವಿಸಿದೆ. ಸ್ಥಳದಲ್ಲಿ  12 ಮಂದಿ ಮೃತಪಟ್ಟು,  ಐವರು ಆಸ್ಪತ್ರೆಯಲ್ಲಿ ಸತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry