ಕಿಂಗ್‌ಫಿಷರ್: 35 ಕೋಟಿ ತೆರಿಗೆ ಬಾಕಿ

7

ಕಿಂಗ್‌ಫಿಷರ್: 35 ಕೋಟಿ ತೆರಿಗೆ ಬಾಕಿ

Published:
Updated:

ನವದೆಹಲಿ (ಪಿಟಿಐ): ಸೇವಾ ತೆರಿಗೆ ಬಾಕಿಯನ್ನು ಪಾವತಿ ಮಾಡಲು ವಿಫಲವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಬ್ಯಾಂಕ್ ಖಾತೆಗಳನ್ನು ಕೇಂದ್ರ ಅಬಕಾರಿ ಮತ್ತು ಸುಂಕಗಳ ಮಂಡಳಿಯು  ಸ್ಥಗಿತಗೊಳಿಸಿದೆ.ಪ್ರತಿದಿನ ಕಿಂಗ್‌ಫಿಷರ್ ಒಂದು ಕೋಟಿ ರೂಪಾಯಿ ಸೇವಾ ತೆರಿಗೆ ಪಾವತಿಸುತ್ತಿತ್ತು. ಕಳೆದ ಕೆಲವು ದಿನಗಳಿಂದ ಪಾವತಿ ಸ್ಥಗಿತಗೊಂಡಿರುವುದರಿಂದ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ 3 ದಿನಗಳ ಹಿಂದೆ ಪತ್ರ ಬರೆಯಲಾಗಿದೆ ಎಂದು ಮಂಡಲಿಯ ಅಧ್ಯಕ್ಷ ಎಸ್. ಕೆ. ಗೋಯಲ್ ತಿಳಿಸಿದ್ದಾರೆ.ಒಟ್ಟು 70 ಕೋಟಿ ತೆರಿಗೆ ಬಾಕಿ ಇತ್ತು. ಅದರಲ್ಲಿ 35 ಕೋಟಿ ರೂ ಪಾವತಿ ಮಾಡಲಾಗಿದ್ದು, ಇನ್ನೂ 35 ಕೋಟಿ ಬಾಕಿ ಬರಬೇಕಿದೆ ಎಂದಿದ್ದಾರೆ.ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಕಳೆದ ಒಂಬತ್ತು ತಿಂಗಳಲ್ಲಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚಿಗೆ ನಷ್ಟ ಅನುಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry