ಶುಕ್ರವಾರ, ಡಿಸೆಂಬರ್ 13, 2019
16 °C

ಕಿಚನ್ ಕಿಲಾಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಚನ್ ಕಿಲಾಡಿಗಳು

ಅಡುಗೆ ಮಾಡುವುದು ಹೇಗೆ? ಅಡುಗೆ ಮಾಡಿ ಪ್ರಸಿದ್ಧರಾಗುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಸುವರ್ಣ ವಾಹಿನಿ ಹೊಸತೊಂದು ರಿಯಾಲಿಟಿ ಶೋ ಏರ್ಪಡಿಸುತ್ತಿದೆ. ಕಾರ್ಯಕ್ರಮದ ಹೆಸರು `ಕಿಚನ್ ಕಿಲಾಡಿಗಳು~.ಅದ್ಭುತ ಅಡುಗೆ ಮಾಡುವ ಸಾಮಾನ್ಯರಿಗೂ ಒಂದು ವೇದಿಕೆ ಕಲ್ಪಿಸಿ, ಅವರನ್ನ ಜನಪ್ರಿಯರನ್ನಾಗಿಸುವುದು `ಕಿಚನ್ ಕಿಲಾಡಿಗಳು~ ಉದ್ದೇಶ. `ಟೇಸ್ಟಿ ಡಿಶ್ ಇಲ್ಲ ಗೇಮ್ ಫಿನಿಶ್~ ಎನ್ನುವ ಅಡಿ ಟಿಪ್ಪಣಿಯ ಈ ಕಾರ್ಯಕ್ರಮದಲ್ಲಿ ಕಿರುತೆರೆಯ ಭೀಮಸೇನ ಸಿಹಿಕಹಿ ಚಂದ್ರು ಸ್ಪರ್ಧಿಗಳ ಪಾಕ ಪ್ರಾವೀಣ್ಯವನ್ನು ಒರೆಗೆ ಹಚ್ಚಲಿದ್ದಾರೆ. ಸೃಜನ್ ಲೋಕೇಶ್ ಕಾರ್ಯಕ್ರಮದ ನಿರೂಪಕರು.ರಾಜ್ಯದ ವಿವಿಧ ಭಾಗಗಳ ಸ್ಪರ್ಧಿಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದ `ಕಿಚನ್ ಕಿಲಾಡಿಗಳು~, ಜ. 30ರಿಂದ ಪ್ರತಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)