ಭಾನುವಾರ, ಏಪ್ರಿಲ್ 18, 2021
29 °C

ಕಿಡಿಗೇಡಿ ಕೃತ್ಯ: ಕಾರು ಗಾಜು ಪುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ವಿವಿಧೆಡೆ ರಸ್ತೆ ಬದಿ ಮತ್ತು ಮನೆಯ ಮುಂದೆ ನಿಲ್ಲಿಸಲಾಗಿದ್ದ 14 ಕಾರುಗಳ ಗಾಜನ್ನು ಕಿಡಿಗೇಡಿಗಳು ಒಡೆದು ಹಾಕಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ವೆಂಕಟೇಶ ನಗರ, ಖೂಬಾ ಪ್ಲಾಟ್, ಜಯನಗರ, ವಿಶ್ವೇಶ್ವರಯ್ಯ ನಗರ, ಬಸವೇಶ್ವರ ಕಾಲೊನಿ, ರಾಜಾಪುರ ಬಡಾವಣೆಯ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆಯಲಾಗಿದೆ. ಸುಮಾರು 14 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಸ್ಟೇಷನ್ ಬಜಾರ್, ಎಂ.ಬಿ.ನಗರ ಮತ್ತು ವಿಶ್ವವಿದ್ಯಾಲಯ ಠಾಣೆಗಳಲ್ಲಿ ದೂರು ದಾಖಲಾಗಿವೆ.`ಕೆಲವು ವಿಕೃತ ಮನಸ್ಸಿನ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. 2008, 2009ರಲ್ಲೂ ಇಂತಹ ಘಟನೆ ನಡೆದ ಬಗ್ಗೆ ವರದಿಗಳಿವೆ. ಈ ಕೃತ್ಯ ಎಸಗಿದ ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದೇವೆ. ಕಠಿಣ ಕಾಯಿದೆ ಅಡಿ ಅವರನ್ನು ಬಂಧಿಸಲಾಗುವುದು.ಅಲ್ಲದೇ ನಗರದ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಮೂಲಕ ರಾತ್ರಿ ವೇಳೆ ಕುಡಿದು, ಮಾದಕ ದ್ರವ್ಯ ಸೇವಿಸಿ ಪುಂಡಾಟಿಕೆ ನಡೆಸುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುವುದು. ಮಧ್ಯರಾತ್ರಿ ಬಳಿಕ ರಾತ್ರಿ ಕಟ್ಟುನಿಟ್ಟಿನ ಗಸ್ತು ಜಾರಿಗೊಳಿಸಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ಎಎಸ್ಪಿ ಭೂಷಣ ಬೊರಸೆ ತಿಳಿಸಿದರು.ಘಟನಾ ಸ್ಥಳಕ್ಕೆ ಎಸ್ಪಿ ಪ್ರವೀಣ್ ಮಧುಕರ್ ಪವಾರ್, ಎಎಸ್ಪಿ, ಇನ್ಸ್‌ಪೆಕ್ಟರ್ ಜೆ.ಎಚ್.ಇನಾಂದಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.