ಸೋಮವಾರ, ಮೇ 10, 2021
21 °C

ಕಿಣ..ಕಿಣ.. ಕ್ರಿಕೆಟ್‌ನಲ್ಲಿ ರನ್ನುಗಳ ಹೊಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಿಣ..ಕಿಣ.. ಸದ್ದಿನ  ಮಾಡುತ್ತ ಬರುತ್ತಿದ್ದ ಚೆಂಡನ್ನು ಮೈದಾನದ ತುಂಬಾ ಓಡಾಡಿಸಿದ ಪ್ರಕಾಶ್ (85; 60ಎಸೆತ. 8ಬೌಂಡರಿ, 4ಸಿಕ್ಸರ್)  ಮತ್ತು ಅಜಯಕುಮಾರ ರೆಡ್ಡಿ (83; 34ಎಸೆತ, 8ಬೌಂಡರಿ, 6ಸಿಕ್ಸರ್)   ಗುರುವಾರ  ಆರಂಭವಾದ  ಮೈಸೂರು ದಸರಾ ಕಪ್ 18ನೇ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರನ್ನುಗಳ ಹೊಳೆ ಹರಿಸಿದರು.ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಅರಮನೆ ನಗರಿಯಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಇವರಿಬ್ಬರ ಆಟದ ನೆರವಿನಿಂದ ದಕ್ಷಿಣ ವಲಯ ತಂಡವು  229 ರನ್ನುಗಳ ಭರ್ಜರಿ ಜಯ ಗಳಿಸಿತು. ಕಳೆದ ಬಾರಿಯ ಚಾಂಪಿಯನ್ ಆಗಿರುವ ದಕ್ಷಿಣ ವಲಯದ ಬೌಲಿಂಗ್ ಮುಂದೆ ಉತ್ತರ ವಲಯವು ಕೇವಲ 70 ರನ್ನು ಗಳಿಸಿ ಆಲೌಟ್ ಆಯಿತು.ಇನ್ನೊಂದು ಪಂದ್ಯದಲ್ಲಿ ಅನುಮನ್ (146; 24 ಬೌಂಡರಿ, 2ಸಿಕ್ಸರ್) ಶತಕದ ನೆರವಿನಿಂದ ಪಶ್ಚಿಮ ವಲಯವು 7 ರನ್ನುಗಳಿಂದ ಪೂರ್ವ ವಲಯದ ವಿರುದ್ಧ ಜಯಿಸಿತು.ಸ್ಕೋರು: ದಕ್ಷಿಣ ವಲಯ: 20 ಓವರುಗಳಲ್ಲಿ 6 ವಿಕೆಟ್‌ಗಳಿಗೆ 299 (ಪ್ರಕಾಶ್ 85, ಅಜಯಕುಮಾರ್ ರೆಡ್ಡಿ 83);  ಉತ್ತರ ವಲಯ: 10.1 ಓವರುಗಳಲ್ಲಿ 70 (ಅಜಯಕುಮಾರ್ ರೆಡ್ಡಿ 33ಕ್ಕೆ3, ಶೇಖರ್ ನಾಯ್ಕ 4ವಿಕೆಟ್); ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 229 ರನ್ನುಗಳ ಜಯ.ಪಶ್ಚಿಮ ವಲಯ : 20 ಓವರುಗಳಲ್ಲಿ 7 ವಿಕೆಟ್‌ಗಳಿಗೆ 233 (ಅನುಮನ್ 146, ಸಂಜಯ್ 27); ಪೂರ್ವ ವಲಯ: 20 ಓವರುಗಳಲ್ಲಿ 226 (ಶುಕ್ರಮ್ 56, ವಿಕಾಸ್ ಸಾಹು 73); ಫಲಿತಾಂಶ: ಪಶ್ಚಿಮ ವಲಯಕ್ಕೆ 7 ರನ್ನುಗಳ ಜಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.