ಕಿತ್ತೂರ ಉತ್ಸವ: ವೀರ ಜ್ಯೋತಿಗೆ ಭವ್ಯಸ್ವಾಗತ

7

ಕಿತ್ತೂರ ಉತ್ಸವ: ವೀರ ಜ್ಯೋತಿಗೆ ಭವ್ಯಸ್ವಾಗತ

Published:
Updated:

ಹಾವೇರಿ: ಕಿತ್ತೂರು ಉತ್ಸವದ ಅಂಗ ವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿ ರುವ ಕಿತ್ತೂರು ಉತ್ಸವದ ವೀರ ಜ್ಯೋತಿ ಸೋಮವಾರ ನಗರಕ್ಕೆ ಆಗ ಮಿಸುತ್ತಿದ್ದಂತೆ ಸ್ಥಳೀಯ ಜಿ.ಎಚ್. ಕಾಲೇಜು ಎದುರಿನಲ್ಲಿ ಭವ್ಯ ಸ್ವಾಗತ ನೀಡಲಾಯಿತು.ಜಿಲ್ಲೆಯ ಬಂಕಾಪುರದಿಂದ ಜ್ಯೋತಿ ನಗರಕ್ಕೆ ಆಗಮಿಸುತ್ತಿದ್ದಂತೆ ಜಿ.ಎಚ್. ಕಾಲೇಜು ಎದುರಿನಲ್ಲಿ ಮಹಿಳೆಯರು ಪೂರ್ಣ ಕುಂಭಗಳೊಂದಿಗೆ ಬರಮಾಡಿ ಕೊಂಡರಲ್ಲದೇ, ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಹಾಗೂ ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಪುಷ್ಪ ಮಾಲೆ ಅರ್ಪಿಸಿ ಸ್ವಾಗತಿಸಿದರು.ನಗರದ ಜೆ.ಎಚ್.ಕಾಲೇಜಿನಿಂದ ಆರಂಭವಾದ ಜ್ಯೋತಿಯ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ-4 ರ ಮೂಲಕ ಸ್ಥಳೀಯ ಸಿದ್ದಪ್ಪ ಹೊಸಮನಿ ವೃತ್ತದ ವರೆಗೆ ನಡೆಯಿತು. ಮಾರ್ಗ ಮಧ್ಯದಲ್ಲಿ ಕಿತ್ತೂರ ಚನ್ನಮ್ಮ ವೀರ ಜ್ಯೋತಿಗೆ ಸಾರ್ವಜನಿಕರು ಹೂಮಾಲೆ ಅರ್ಪಿಸಿ ಸ್ವಾಗತಿಸುವ ದೃಶ್ಯ ಸಾಮಾನ್ಯವಾಗಿತ್ತು.ವಾದ್ಯ ಮೇಳದವರು, ಪೂರ್ಣ ಕುಂಭ ಹೊತ್ತ ಮಹಿಳೆಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ಜನಪ್ರತಿ ನಿಧಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ವೀರ ಜ್ಯೋತಿ ಬಿಳ್ಕೋಡುವ ಮುನ್ನ ಶಾಸಕ ನೆಹರೂ ಓಲೇಕಾರ ಮಾತನಾಡಿ, ಕಿತ್ತೂರ ವೀರ ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಮಹಿಳೆಯಾಗಿದ್ದು, ಅವಳ ಹೆಸರಿನಲ್ಲಿ ನಡೆಯುವ ಉತ್ಸವದ ಜನಜಾಗೃತಿ ಗಾಗಿ ಈ ವೀರ ಜ್ಯೋತಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ನಗರಕ್ಕೆ ಆಗಮಿ ಸಿದ ವೀರ ಜ್ಯೋತಿಗೆ ಜಿಲ್ಲೆಯ ಪರವಾಗಿ ಭವ್ಯ ಸ್ವಾಗತವನ್ನು ನೀಡಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಜಿ.ಪಂ.ಸಿಇಓ ಉಮೇಶ ಕುಸುಗಲ್, ಜಿ.ಪಂ.ಉಪ ಕಾರ್ಯದರ್ಶಿ ಗೋವಿಂದಸ್ವಾಮಿ, ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಎಂ.ಎಂ.ಅಗಡಿ, ಡಿವೈಎಸ್‌ಪಿ ಎಲ್.ಎಸ್.ಸಿಂಗದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿ ಕಲಾ ಹುಡೇದ,

 

ನಗರಸಭೆ ಸದಸ್ಯರಾದ ನಾಗೇಂದ್ರ ಕಟಕೋಳ, ಮಂಜುಳಾ ಕರಬಸಮ್ಮನವರ, ಜಿ.ಪಂ.ಮಾಜಿ ಅಧ್ಯಕ್ಷರಾದ ಡಾ.ಮಲ್ಲಪ್ಪ ಹರಿಜನ, ಪರಮೇಶಪ್ಪ ಮೇಗಳಮನಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಸಾಹಿತಿ ಸತೀಶ ಕುಲಕರ್ಣಿ, ಗಂಗಾಧರ ನಂದಿ, ನಗರಸಭೆ ಆಯುಕ್ತ ಕೆ.ಎಚ್.ರುದ್ರಪ್ಪ, ಜಿ.ಎಚ್.ಕಾಲೇಜು ಪ್ರಾಚಾರ್ಯ ಡಾ.ಬಿ.ಸಿ.ಬನ್ನೂರ, ಮುಖಂಡರಾದ ಸಿದ್ಧರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ, ಬಸವರಾಜ ಹಾಲಪ್ಪನ ವರ, ನಾರಾಯಣ ಕಾಳೆ ಅಲ್ಲದೇ ನೂರಾರು ಜನರು ಹಾಜರಿದ್ದರು.ಇದೇ ಸಂದರ್ಭದಲ್ಲಿ ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಹಾವೇರಿ ಕಲಾ ತಂಡದ ಕಲಾವಿದರು ನಾಡು ನುಡಿಯ ಸ್ವಾಭಿಮಾನವನ್ನು ಸಾರುವ `ಚೆನ್ನಮ್ಮನ ಸಂದೇಶ~ ಎಂಬ ಅರ್ಥ ಪೂರ್ಣ ಬೀದಿ ನಾಟಕವನ್ನು ಪ್ರದರ್ಶಿಸಿದರು.ಸಾಕ್ಷರ ಸಮಿತಿ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದೆ ರಾಜೇಶ್ವರಿ ರವಿ ಸಾರಂಗಿ ಮಠ ರಾಣಿ ಚೆನ್ನಮ್ಮಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರೆ, ಥ್ಯಾಕರೆ ಪಾತ್ರದಲ್ಲಿ ಶಿಕ್ಷಕ ಕೆ.ಆರ್. ಹಿರೇಮಠ ಅಭಿನಯಿಸಿದರು. ಚಂದ್ರ ಶೇಖರ ಕುಂಬಾರರ ಪಾತ್ರದಲ್ಲಿ ಕುಮಾರದಾಸ ಹೂಗಾರ, ಚಂಪಾ ಪಾತ್ರದಲ್ಲಿ ಕೆ.ಎನ್.ಜಾನವೇಕರ, ರಾಯಣ್ಣನ ಪಾತ್ರದಲ್ಲಿ ರಾಜು ಹಿರೇಮಠ, ಸೂತ್ರದಾರರಾಗಿ ಶಂಕರ ತುಮ್ಮಣ್ಣ ನವರ, ಮುತ್ತುರಾಜ ಹಿರೇಮಠ, ಸತೀಶ ಚವ್ಹಾಣ ಅಭಿನಯಿಸಿದರು.ಹಿರಿಯ ಕವಿ ಗಂಗಾಧರ ನಂದಿ ಚೆನ್ನಮ್ಮಳ ಕುರಿತು ಕವಿತೆ ವಾಚನ ಮಾಡಿದರು. ನಂತರ ಕಿತ್ತೂರ ಚನ್ನಮ್ಮ ವೀರ ಜ್ಯೋತಿ ಹಾವೇರಿಯಿಂದ ರಾಣೆ ಬೆನ್ನೂರಿಗೆ ತೆರಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry