ಸೋಮವಾರ, ಜೂಲೈ 13, 2020
29 °C

ಕಿನ್ನರರು ಕೀಳರಿಮೆ ತೊರೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ‘ನಾಗರಿಕ ಸಮಾಜದಲ್ಲಿರುವ ಕಿನ್ನರರ (ನಪುಂಸಕರು) ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತಿಸಿ, ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಕರೆತರಬೇಕಿದೆ’ ಎಂದು ನಗರದ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಹೇಳಿದರು.ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸುಬೋಧ ಗ್ರಾಮೀಣಾಭಿವೃದ್ಧಿ  ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಿನ್ನರರ ಹಕ್ಕುಗಳ ಕುರಿತ ಜನ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಕಿನ್ನರರ ಬಗ್ಗೆ ಪ್ರತ್ಯೇಕವಾದ ಯಾವುದೇ ಕಾನೂನುಗಳು ಇಲ್ಲವಾದರೂ ಅವರಲ್ಲಿನ ಕೀಳರಿಮೆಯನ್ನು ತೊಡೆಯುವ ಉದ್ದೇಶದಿಂದ ಪ್ರತ್ಯೇಕ ಕಾನೂನು ರಚಿಸುವ ಪ್ರಯತ್ನಗಳು ನಡೆದಿವೆ. ಇದರೊಂದಿಗೆ ಸಮಾಜವೂ ಕಿನ್ನರರ ಬಗ್ಗೆ ತಿರಸ್ಕಾರ ಮನೋಭಾವನೆಯನ್ನು ತೋರದೆ, ಎಲ್ಲ ರೀತಿಯ ಮಾನವ ಹಕ್ಕುಗಳನ್ನೂ ಅವರಿಗೆ ಸಮಾನ ರೂಪದಲ್ಲಿ ಕಲ್ಪಿಸಬೇಕು ಎಂದರು.ಸವಣೂರಿನ ವಕೀಲರ ಸಂಘದ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಜೆ.ಎಸ್ ಕುಲಕರ್ಣಿ, ಆರ್ಥಿಕವಾಗಿ ಹಿಂದುಳಿದ ಕಿನ್ನರರೂ ಕಾನೂನು ನೆರವು ಸಮಿತಿಯ ಮೂಲಕ ಸಂಪೂರ್ಣ ಉಚಿತವಾಗಿ ಕಾನೂನಿನ ನೆರವು ಪಡೆಯಬಹುದು. ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು ಎಂದರು. ಸಹಾಯಕ ಸರಕಾರಿ ಅಭಿಯೋಜಕರಾದ ಎಸ್.ಜಿ ಕೂಡಲಗಿಮಠ ಹಾಗೂ ನ್ಯಾಯವಾದಿಗಳಾದ ವಿ.ಬಿ ಬಿಜ್ಜೂರ ಉಪಸ್ಥಿತರಿದ್ದರು. ಕಿನ್ನರರ ಹಕ್ಕುಗಳು ಹಾಗೂ ಸಮಾಜದಲ್ಲಿ ಅವರ ಭದ್ರತೆ ಎಂಬ ವಿಷಯದ ಬಗ್ಗೆ ನ್ಯಾಯವಾದಿ ಎಮ್.ಎಸ್. ಮುದಗಲ್ ಉಪನ್ಯಾಸ ನೀಡಿದರು.ಸುಬೋಧ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ವಕೀಲರ ಸಂಘದ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂತೋಷ ಇಜಂತಕರ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.