ಕಿನ್ನಿಗೋಳಿ: ಮಳೆಗಾಳಿಗೆ ಕುಸಿದ ಮನೆ, ನಷ್ಟ

ಶನಿವಾರ, ಜೂಲೈ 20, 2019
22 °C

ಕಿನ್ನಿಗೋಳಿ: ಮಳೆಗಾಳಿಗೆ ಕುಸಿದ ಮನೆ, ನಷ್ಟ

Published:
Updated:

ಕೆಮ್ರೋಲ್ (ಮೂಲ್ಕಿ): ಕಿನ್ನಿಗೋಳಿ ಬಳಿಯ ಕೆಮ್ರೋಲ್ ಗ್ರಾಮ ಪಂಚಾಯಿತಿ ಬಳಿಯ ಹಸನಬ್ಬ ಎಂಬವರಿಗೆ ಸೇರಿದ ಮನೆಯು ಭಾನುವಾರ ಸುರಿದ ಮಳೆಗಾಳಿಗೆ ಕುಸಿದು ಬಿದ್ದಿದೆ.ಮಳೆಗಾಳಿಯ ರಭಸಕ್ಕೆ ಏಕಾಏಕಿ ಮನೆಯ ಛಾವಣಿಯ ಅರ್ಧ ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಇಬ್ಬರು ಸಣ್ಣ ಮಕ್ಕಳು ಸಹಿತ ನಾಲ್ಕು ಮಂದಿ ಮನೆಯೊಳಗಿದ್ದರು ಅವರು ಅಪಾಯದಿಂದ ಪಾರಾಗಿದ್ದಾರೆ. ಮನೆ ಮಾಲೀಕ ಪಿ.ಎಂ. ಹಸನಬ್ಬನವರ ಭುಜಕ್ಕೆ ಸ್ವಲ್ಪ ಗಾವಾಗಿದ್ದು ಸ್ಥಳೀಯ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಬಡ ಕೂಲಿ ಕಾರ್ಮಿಕರಾಗಿರುವ ಹಸನಬ್ಬನವರ ಮನೆ ಕುಸಿತದಿಂದ ಮನೆಯವರು ನಿರಾಶ್ರಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮನೆ ಕುಸಿತದಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ತಿಳಿಸಿದ್ದಾರೆ.ಕೆಮ್ರೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯ ಮಯ್ಯದ್ದಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry