ಕಿಮ್ಸನಲ್ಲಿ ಶಸ್ತ್ರಚಿಕಿತ್ಸಕರ ರಾಜ್ಯಮಟ್ಟದ ಸಮ್ಮೇಳನ ಆರಂಭ

7

ಕಿಮ್ಸನಲ್ಲಿ ಶಸ್ತ್ರಚಿಕಿತ್ಸಕರ ರಾಜ್ಯಮಟ್ಟದ ಸಮ್ಮೇಳನ ಆರಂಭ

Published:
Updated:

ಹುಬ್ಬಳ್ಳಿ: ಈಚೆಗೆ ನಡೆದ ಎಲುಬು- ಕೀಲು ತಜ್ಞರ ಸಮ್ಮೇಳನದ ಸಂದರ್ಭ ದಲ್ಲಿ ಶಸ್ತ್ರಚಿಕಿತ್ಸೆಯನ್ನು ನೇರವಾಗಿ ವೀಕ್ಷಿಸಿ, ಸಂದೇಹ ಪರಿಹರಿಸಿಕೊಂಡ ಕಿರಿಯ ವೈದ್ಯರು ಅಲ್ಲಿದ್ದರು. ಅಂದು ತಮ್ಮ ಅಮೂಲ್ಯ ಸಲಹೆ-ಸೂಚನೆ ನೀಡಿದವರೂ ಅಲ್ಲಿದ್ದರು. ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ಅತಿಥಿ ಗಳು ಕೂಡ ಭಾಗವಹಿಸಿದ್ದರು.

 

ಆದರೆ  ಕಿಮ್ಸ ಸಭಾಂಗಣದಲ್ಲಿ ಅಂದು ವೀಕ್ಷಿಸಿದ ಶಸ್ತ್ರಚಿಕಿತ್ಸೆಗೂ ಗುರುವಾರ ವೀಕ್ಷಿಸಿದ ಕಾರ್ಯಕ್ರಮಕ್ಕೂ ಭಾರಿ ವ್ಯತ್ಯಾಸವಿತ್ತು. ಹೆಚ್ಚು ಸಾಮರ್ಥ್ಯದ ತಂತ್ರಜ್ಞಾನದ ಮೂಲಕ ಗುರುವಾರ ಪರದೆಯಲ್ಲಿ ಕಂಡ ದೃಶ್ಯಗಳು ಹಾಗೂ ಧ್ವನಿ ಸ್ಪಷ್ಟವಾಗಿತ್ತು.ಕಿಮ್ಸನಲ್ಲಿ ಆರಂಭಗೊಂಡಿರುವ ಶಸ್ತ್ರ ಚಿಕಿತ್ಸಕರ ರಾಜ್ಯಮಟ್ಟದ 30ನೇ ಸಮ್ಮೇ ಳನದ ಅಂಗವಾಗಿ ನಡೆದ ಶಸ್ತ್ರಚಿಕಿತ್ಸೆಯ ನೇರ ಪ್ರಸಾರಕ್ಕೆ ಹೆಚ್ಚುವರಿ ಸಾಮರ್ಥ್ಯದ ತಂತ್ರಜ್ಞಾನವನ್ನು ಬಳಸಲಾಗಿತ್ತು. ಹೀಗಾಗಿ ಕಾರ್ಯಕ್ರಮ ವೀಕ್ಷಿಸಿದ ವೈದ್ಯರು ಪುಳಕಗೊಂಡರು.ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯದ ನೆರವಿನೊಂದಿಗೆ ಎಸ್‌ಟಿಪಿಐ (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ), ಈ ಸೌಲಭ್ಯವನ್ನು ಒದಗಿಸಿದೆ. ಕೊಯಮತ್ತೂರಿನ ಜಿ.ಇ. ಎಂ. ಆಸ್ಪತ್ರೆಯಲ್ಲಿ ನಡೆದ ಉದರ ಶಸ್ತ್ರ ಕ್ರಿಯೆ (ಲ್ಯಾಪ್ರೋಸ್ಕೋಪಿ) ಹಾಗೂ ಹೈದರಾಬಾದ್‌ನ ಎ.ಐ.ಜಿಯಲ್ಲಿ ನಡೆದ ಎಂಡೋಸ್ಕೋಪಿ ಶಸ್ತ್ರಕ್ರಿಯೆಯ ನೇರ ಪ್ರ ಸಾರ ನಡೆಯಿತು.

 

ಅಪರೂಪದ `ಸಿಲ್ಸ್~  ಸೇರಿದಂತೆ ಒಟ್ಟು 12 ಶಸ್ತ್ರಚಿಕಿತ್ಸೆ ಗಳನ್ನು ತೋರಿಸಲಾಯಿತು.`ಇದು ಹೈ ಡೆಫಿನಿಷನ್ ರಿಲೇ ವ್ಯವಸ್ಥೆ. 4 ಎಂಬಿಪಿಎಸ್‌ಗಳಿಗೂ ಹೆಚ್ಚಿನ ವೇಗ ದಲ್ಲಿ ಪ್ರಸಾರ ಸಾಮರ್ಥ್ಯದ ತಂತ್ರಜ್ಞಾ ನವನ್ನು ಇದಕ್ಕಾಗಿ ಬಳಸಲಾಗಿದೆ~ ಎಂದು ಕಿಮ್ಸ ಶಸ್ತ್ರಚಿಕಿತ್ಸಾ ವಿಭಾಗದ ಡಾ. ವಿಜಯ ಕಾಮತ್ `ಪ್ರಜಾವಾಣಿ~ಗೆ ತಿಳಿಸಿದರು.ಶಸ್ತ್ರಚಿಕಿತ್ಸಾ ಕ್ಷೇತ್ರದ ಹೊಸ ಆವಿಷ್ಕಾರ ಗಳು: ಸಮ್ಮೇಳನದ ಅಂಗ ವಾಗಿ ಹಮ್ಮಿಕೊಳ್ಳಲಾಗಿರುವ ವಸ್ತು ಪ್ರದ ರ್ಶನದಲ್ಲಿ ಶಸ್ತ್ರಚಿಕಿತ್ಸಾ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ನೋಡಬಹು ದಾಗಿ ದೆ. ನೂರಕ್ಕೂ ಹೆಚ್ಚು ಮಳಿಗೆಗಳಿ ರುವ ಪ್ರದರ್ಶನದಲ್ಲಿ ಹೆಚ್ಚಿನ ಮಳಿಗೆ ಗಳಲ್ಲಿ ಉಪಕರಣ ಇರಿಸಲಾಗಿದೆ. ಸಾಂಪ್ರದಾ ಯಿಕ ಉಪಕರಣಗಳಿಗೆ  ಆಧು ನಿಕ ಸ್ಪರ್ಶ ನೀಡಿ ವೈದ್ಯ ಸ್ನೇಹಿ ಹಾಗೂ ಹೊಸ ತಲೆಮಾರಿಗೆ ಹೊಂದುವಂತೆ ಮಾಡಿರುವು ದನ್ನು ಇಲ್ಲಿ ಕಾಣಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry