ಕಿಯಾಂಗ್, ಕೃಷ್ಣ ಮಾತುಕತೆ

7

ಕಿಯಾಂಗ್, ಕೃಷ್ಣ ಮಾತುಕತೆ

Published:
Updated:
ಕಿಯಾಂಗ್, ಕೃಷ್ಣ ಮಾತುಕತೆ

ಬೀಜಿಂಗ್ (ಐಎಎನ್‌ಎಸ್): ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಮೂರು ದಿನಗಳ  ಶೃಂಗಸಭೆ ಬೀಜಿಂಗ್‌ನಲ್ಲಿ ಬುಧವಾರ ಆರಂಭವಾಗಿದ್ದು ವೀಕ್ಷಕ ರಾಷ್ಟ್ರದ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಚೀನಾದ ಉಪ ಪ್ರಧಾನಿ ಲೀ ಕಿಯಾಂಗ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.ಉಭಯ ದೇಶಗಳ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳ ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು  45 ನಿಮಿಷ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ, `ಚೀನಾಕ್ಕೆ ಇದು ನನ್ನ ಎರಡನೆಯ ಭೇಟಿ. ಚೀನಾದ ಅಧ್ಯಕ್ಷರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಿದಂತೆ 2012 ಭಾರತ-ಚೀನಾ ಬಾಂಧವ್ಯದ ವರ್ಷವಾಗಿದ್ದು, ಎರಡೂ ದೇಶಗಳ ಮೈತ್ರಿಯಲ್ಲಿ ಅಪಾರ ಪ್ರಗತಿಯಾಗುತ್ತಿದೆ~ ಎಂದರು.ಇಂದು ಕೃಷ್ಣ ಭಾಷಣ: ಚೀನಾ ಹಾಗೂ ರಷ್ಯಾ ಪ್ರಾಬಲ್ಯವಿರುವ `ಎಸ್‌ಸಿಒ~ ಅಧಿವೇಶನದಲ್ಲಿ ಇತರ ಸದಸ್ಯ ರಾಷ್ಟ್ರಗಳಾದ ಮಧ್ಯ ಏಷ್ಯಾದ ಕಜಕಸ್ತಾನ, ಉಜ್ಬೇಕಿಸ್ತಾನ, ತಜಕಿಸ್ತಾನ ಹಾಗೂ ಕಿರ್ಜಿಸ್ತಾನ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು ವೀಕ್ಷಕ ರಾಷ್ಟ್ರಗಳಾಗಿ ಭಾರತ, ಪಾಕಿಸ್ತಾನ ಸೇರಿದಂತೆ ಮಂಗೋಲಿಯಾ, ಇರಾನ್ ಪಾಲ್ಗೊಳ್ಳುತ್ತಿವೆ. ಈ ಬಾರಿಯ ಸಭೆಯಲ್ಲಿ ಆಫ್ಘಾನಿಸ್ತಾನಕ್ಕೂ ವೀಕ್ಷಕ ರಾಷ್ಟ್ರದ ಸ್ಥಾನಮಾನ ನೀಡಲಾಗಿದೆ.ಶೃಂಗಸಭೆಯ ಸರ್ವ ಸದಸ್ಯರ ಸಭೆಯಲ್ಲಿ ಗುರುವಾರ ಕೃಷ್ಣ `ಎನ್‌ಸಿಒ~ದಲ್ಲಿ ಭಾರತದ ಪಾತ್ರದ ಕುರಿತು ಮಾತನಾಡುವ ಅವಕಾಶವನ್ನೂ ಪಡೆದಿದ್ದಾರೆ. ಚೀನಾದ ವಿದೇಶಾಂಗ ಸಚಿವ ಯಾಂಗ್ ಜೇಚಿ ಅವರನ್ನು ಗುರುವಾರ ಭೇಟಿ ಮಾಡುವ ನಿರೀಕ್ಷೆ ಇದೆ.ಭಾರತ ಈ ಸಭೆಯಲ್ಲಿ ವೀಕ್ಷಕ ದೇಶವಾಗಿ ಮಾತ್ರ ಪಾಲ್ಗೊಳ್ಳುತ್ತಿರುವುದರಿಂದ ನೆರೆಯ ಪಾಕಿಸ್ತಾನದೊಂದಿಗಿನ ಸಂಬಂಧಗಳ ಕುರಿತು ಚರ್ಚೆ ನಡೆಯುವುದೋ ಇಲ್ಲವೊ ತಿಳಿದಿಲ್ಲ. ಆದರೆ, ಕೃಷ್ಣ ಅವರಿಗೆ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರೊಂದಿಗೆ ಕಾಲ ಕಳೆಯುವ ಅವಕಾಶವಂತೂ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry