ಗುರುವಾರ , ಜೂನ್ 17, 2021
21 °C

ಕಿರಣ್‌ ಖೇರ್‌ಗೆ ಕಪ್ಪು ಬಾವುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ, ಐಎಎನ್‌ಎಸ್‌): ಚಂಡೀಗಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್‌ ಖೇರ್‌ ಅವರು ಮಂಗಳವಾರ ಕ್ಷೇತ್ರಕ್ಕೆ ಬರು­ತ್ತಿದ್ದಂತೆಯೇ ಪಕ್ಷದ ಅತೃಪ್ತ ಕಾರ್ಯ­ಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಅವರ ವಿರುದ್ಧ ಘೋಷಣೆ ಕೂಗಿದರು.ಅವರ ಪತಿ, ನಟ ಅನುಪಮ್‌ ಖೇರ್‌ ಅವರ ಕಾರಿನ ಮೇಲೆ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದರು. ಆದರೆ ಕಾರಿನಲ್ಲಿ ಕಿರಣ್‌ ಇರಲಿಲ್ಲ.

‘ನಾನು ಚಂಡೀಗಡದ ಮಗಳು. ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನನ್ನನ್ನು ವಿರೋಧಿಸುತ್ತಿರುವವರೂ ಬಿಜೆಪಿ ಕುಟುಂಬ­ದವರೇ. ನಾವು ಯಾವತ್ತೂ ಒಂದಾಗಿರುತ್ತೇವೆ’ ಎಂದು ಕಿರಣ್‌ ಹೇಳಿದ್ದಾರೆ.ಮಾಜಿ ಸಂಸದ ಸತ್ಯಪಾಲ್‌ ಜೈನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್‌ ಟಂಡನ್‌, ಮಾಜಿ ಸಚಿವ ಹರ್‌ಮೋಹನ್‌ ಧವನ್‌ ಅವರನ್ನು ಕಡೆಗಣಿಸಿ ಕಿರಣ್‌ ಖೇರ್‌ ಅವರಿಗೆ ಟಿಕೆಟ್‌ ನೀಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.ಬನ್ಸಲ್‌ ನಾಮಪತ್ರ ಸಲ್ಲಿಕೆ: ಈ ಮಧ್ಯೆ, ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ­ಯಾಗಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ಸಚಿವ ಪಿ.ಕೆ ಬನ್ಸಲ್‌ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಚಂಡೀಗಡ­ದಲ್ಲಿ ಏ. 10ರಂದು ಮತದಾನ ನಡೆಯಲಿದೆ.ಐದು ವರ್ಷದಲ್ಲಿ ದುಪ್ಪಟ್ಟು ಆಸ್ತಿ: ಚಂಡೀಗಡದಿಂದ ಪುನರಾಯ್ಕೆ ಬಯಸಿ­ರುವ ಬನ್ಸಲ್‌ ಆಸ್ತಿ ಮೌಲ್ಯ ಐದು ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ತಮ್ಮ ಹಾಗೂ ಪತ್ನಿಯ ಬಳಿಯಲ್ಲಿ ₨7.7 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿ­ಕೊಂಡಿದ್ದಾರೆ.2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ₨3.86 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.