ಬುಧವಾರ, ನವೆಂಬರ್ 20, 2019
20 °C

ಕಿರಿದಾದ ಕೀರೆಹೊಳೆ: ಮಲಿನಗೊಂಡ ನೀರು

Published:
Updated:

ಗೋಣಿಕೊಪ್ಪಲು: ಪಟ್ಟಣದ ತ್ಯಾಜ್ಯ ವನ್ನೆಲ್ಲ ಒಡಲಲ್ಲಿ ತುಂಬಿಕೊಂಡು ಸಾಗುವ ಕೀರೆ ಹೊಳೆ ಇತ್ತೀಚಿನ ವರ್ಷ ಗಳಲ್ಲಿ ಒತ್ತುವರಿಯಿಂದಾಗಿ ಮತ್ತಷ್ಟು ಕಿರುದಾಗುತ್ತಾ ಬರುತ್ತಿದೆ. ಪಟ್ಟಣದ ಹಿಂಭಾಗದಲ್ಲಿ ಹರಿಯುವ ಈ ನದಿ ಬೇಸಿಗೆಯಲ್ಲಿ ನೀರಿಲ್ಲದೆ ಕಸದ ತೊಟ್ಟಿ ಯಾಗುತ್ತದೆ. ಮಳೆಗಾಲದಲ್ಲಿ ಕಸವನ್ನೆಲ್ಲ ಮುಂದಕ್ಕೆ ಸಾಗಿಸುತ್ತಾ ತುಂಬಿ ಹರಿಯುತ್ತದೆ.ನದಿ ಅತ್ಯಂತ ಕಿರಿದಾಗ್ದ್ದಿದು  ನದಿಯ ಎರಡೂ ದಡಗಳು ಭಾರಿ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಕಳೆದ ಎರಡು ವರ್ಷದಿಂದ ಗೋಣಿಕೊಪ್ಪಲು ಪಟ್ಟ ಣದ ಭೂಮಿಗೆ ಚಿನ್ನದ ಬೆಲೆ ಬಂದ ಮೇಲಂತೂ ನದಿ ಪ್ರಾತವೇ ಬದಲಾಗಿದೆ. ಕೆಲವು ಪ್ರಭಾವಿಗಳು ಜೆಸಿಬಿಯಿಂದ ನದಿಗೆ ಮಣ್ಣು ತುಂಬಿಸಿ ನದಿಯ ದಡವನ್ನು ನಿವೇಶನ ಮಾಡಿದ್ದಾರೆ.ಕಿರಿದಾದ ನದಿಯೂ ಕೂಡ ಮಾಲಿನ್ಯ ದಿಂದ ಸೊರಗುತ್ತಿದೆ. ಪಟ್ಟಣದ ಕಸಕಡ್ಡಿ ಗಳೆಲ್ಲ ನದಿಯಲ್ಲಿ ಕರಗಿ ನೀರು ಸಂಪೂರ್ಣವಾಗಿ ಮಾಲಿನ್ಯಗೊಂಡಿದೆ. ಇದೇ ನೀರು ಮುಂದೆ ಬೆಸಗೂರು ಬಳಿ ಸಾಗಿ ಕಾನೂರು ಹತ್ತಿರ ಲಕ್ಷ್ಮಣ ತೀರ್ಥ ನದಿ ಸೇರುತ್ತದೆ. ಇದಕ್ಕೂ ಮೊದಲು ಕಿರುಗೂರಿನ ಜನತೆ ಇದೇ ನೀರನ್ನು  ಪಾತ್ರೆ, ಬಟ್ಟೆ ತೊಳೆಯಲು ಬಳಸುತ್ತಿದ್ದರು.ನದಿಗೆ ಸೇರದಿರುವ ತ್ಯಾಜ್ಯವೇ ಇಲ್ಲ. ಹೋಟೆಲ್, ಚರಂಡಿ, ಮಾರುಕಟ್ಟೆಯ ನೀರಿಗೆಲ್ಲ ಕೀರೆ ಹೊಳೆಯೆ ಚರಂಡಿ. ಕಳೆದ ಎರಡು ವರ್ಷಗಳ ಹಿಂದೆ ಗ್ರಾ.ಪಂ. ಕೀರೆ ಹೊಳೆಯ ಹೂಳೆತ್ತಿಸಿತ್ತು. ಇದೀಗ ಮತ್ತೆ ಹೂಳು ತುಂಬಿದೆ. ನದಿಯ ಎರಡೂ ಬದಿಯಲ್ಲಿ ಕಸಕಡ್ಡಿ ಬೆಳುದು ನಿಂತಿದೆ. ನದಿಯ  ಹೂಳೆತ್ತಿ ಮಾಲಿನ್ಯ  ನಿವಾರ ಣೆಗೆ ಉಪ ವಿಭಾಗಾಧಿಕಾರಿ ಡಾ.ಎಂ. ಆರ್. ರವಿ ಗ್ರಾ.ಪಂ.ಗೆ ಕಟ್ಟು ನಿಟ್ಟಾಗಿ ಆದೇಶಿಸಿದ್ದರು. ಆದರೆ ಗ್ರಾ.ಪಂ. ಮಾತ್ರ ಇತ್ತ ಗಮನ ಹರಿಸದೆ ಮೌನವಾಗಿದೆ.ನದಿಯ ದಡದಲ್ಲಿ ವಾಸಿಸುವ ಜನತೆ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಇವರನ್ನು ಅಲ್ಲಿಂದ ತೆರವು ಗೊಳಿಸುವ ಯತ್ನ ನಡೆದರೂ ಯಾವುದೇ ಬದಲಾವಣೆ ಆಗಿಲ್ಲ. ಈ ವರ್ಷ ಮತ್ತೆ ಗಂಜಿ ಕೇಂದ್ರ ತೆರೆಯುವುದಕ್ಕೆ ಸಿದ್ಧತೆ ಗಳು ನಡೆಯುತ್ತಿವೆ. ಗೋಣಿಕೊಪ್ಪಲು ಪಟ್ಟಣ ವ್ಯಾಪಕವಾಗಿ ಬೆಳೆಯುತ್ತಿರುವು ದರಿಂದ ಕಸದ ರಾಶಿಯೂ ಹೆಚ್ಚುತ್ತಿದೆ. ಜತೆಗೆ ಕೀರೆ ಹೊಳೆಯೂ ಇದೀಗ ಪಟ್ಟಣದ ಮಧ್ಯಭಾಗಕ್ಕೆ ಸೇರಿಹೋಗಿದೆ. ಹೀಗಾಗಿ ನದಿಯ ಮಾಲಿನ್ಯ ಹೆಚ್ಚಿ ನೀರು ತೀರ ಕಲುಷಿತಗೊಂಡಿದೆ. ನದಿಯ ಕೆಳ ಭಾಗದ ಜನತೆ ಈ ಕಲುಷಿತ ನೀರನ್ನು ಬಳಸಿ ಮುಂದೊಂದು ದಿನ  ಹಲವು ರೋಗಗಳಿಗೆ   ತುತ್ತಾಗುವ ದಿನ ದೂರವಿಲ್ಲ.ಇಂತಹ ಅಪಾಯ ಸಂಭವಿಸುವ ಮುನ್ನ ಹೊಳೆಗೆ ಕಸ ಹಾಕುವುದನ್ನು ನಿಲ್ಲಿಸಬೇಕು, ಕೀರೆಹೊಳೆ ಹೂಳೆತ್ತಿಸಿ ನೀರನ್ನು ಶುದ್ಧ ಗೊಳಿಸಬೇಕು. ಒತ್ತುವರಿ ಯನ್ನು ತೆರವು ಗೊಳಿಸಿ ನದಿ ಪಾತ್ರ ರಕ್ಷಿಸಬೇಕು. ನದಿಯ ದಡವನ್ನು ಶುಚಿ ಯಾಗಿ ಇಟ್ಟುಕೊಳ್ಳಬೇಕು. ಯಾರಿಗೂ  ಒತ್ತುವರಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯ.

ಪ್ರತಿಕ್ರಿಯಿಸಿ (+)