ಕಿರಿಯರಿಗೆ ಅನುಭವ ಧಾರೆ ಎರೆಯಿರಿ: ರಟ್ಟೀಹಳ್ಳಿ ಶ್ರೀ

7

ಕಿರಿಯರಿಗೆ ಅನುಭವ ಧಾರೆ ಎರೆಯಿರಿ: ರಟ್ಟೀಹಳ್ಳಿ ಶ್ರೀ

Published:
Updated:

ಹಿರೇಕೆರೂರ: ನಿವೃತ್ತ ನೌಕರರು ತಮ್ಮಲ್ಲಿರುವ ಜ್ಞಾನ ಹಾಗೂ ಅನುಭವವನ್ನು ಕಿರಿಯರಿಗೆ ಧಾರೆ ಎರೆಯುವ ಮೂಲಕ ಯುವ ಜನಾಂಗವನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕು ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಗುರು ಭವನದಲ್ಲಿ ಸೋಮವಾರ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ 70 ವರ್ಷ ತುಂಬಿದ ಆಜೀವ ಸದಸ್ಯರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬದ್ಧತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಕಾರಣದಿಂದ 70ರ ಇಳಿ ವಯಸ್ಸಿನಲ್ಲಿಯೂ ಲವಲವಿಕೆಯಿಂದ ಬಾಳಲು ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಬಿ. ತೆಂಬದ ಮಾತನಾಡಿ, ಹಲವಾರು ಹಿರಿಯರು ಸೇರಿ ಈ ಸಂಘವನ್ನು ಕಟ್ಟುವ ಮೂಲಕ 70 ವರ್ಷ ತುಂಬಿದ ನಿವೃತ್ತರಿಗೆ ಸನ್ಮಾನ ಮಾಡಿ ಅವರ ಜೀವನದಲ್ಲಿ ಹೊಸ ಚೈತನ್ಯ ನೀಡುವ ಧ್ಯೇಯ ಹೊಂದಲಾಗಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್.ವಿ.ಬೆಟ್ಟಳ್ಳೇರ, ನಿವೃತ್ತರ ಜೀವನ ಹಿಂದಿನಂತಿಲ್ಲ, ಸಾಕಷ್ಟು ಬದಲಾವಣೆ ಕಂಡಿದೆ. ವೃದ್ಧ ತಂದೆ-ತಾಯಿಯನ್ನು ಮಕ್ಕಳು ಸರಿಯಾಗಿ ಪೋಷಣೆ ಮಾಡುತ್ತಿಲ್ಲ. ಇಂದಿನ ಮಕ್ಕಳಿಗೆ ಪಿಂಚಣಿ ಹಣ ಬೇಕು.

ಆದರೆ, ಪಾಲಕರ ಆರೈಕೆ ಬೇಕಿಲ್ಲ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ. ಅಣ್ಣಿಗೇರಿ, ಕಾರ್ಯದರ್ಶಿ ಮಹ್ಮದ್ ಹನೀಫ್, ತಾಲ್ಲೂಕು ಕಾರ್ಯದರ್ಶಿ ಪ.ಶಿ. ಮಕರಿ, ಎಸ್.ಆರ್. ದೊಡ್ಡಬಸಪ್ಪನವರ, ಎಸ್. ಆರ್. ನಾಗನೂರ, ಬಿ. ರುದ್ರಪ್ಪ, ಎಚ್.ಬಿ. ಹನುಮಗೌಡರ, ಬಿ.ಎಸ್. ಬಡಿಗೇರ, ಎಸ್.ಸಿ. ಹುಲ್ಲತ್ತಿ, ಬಿ.ಬಿ. ಕಿಚಡೇರ, ಹನುಮಂತಗೌಡ ಪಾಟೀಲ, ಬಿ.ಎಚ್. ಬಾಬಣ್ಣನವರ, ಬಾಳವ್ವ ಆರಾಧ್ಯಮಠ, ವಿ.ಎನ್. ಮುತ್ತಳ್ಳಿ, ಬಿ.ಬಿ. ದೊಡ್ಡಭರಮಪ್ಪನವರ, ಬಿ.ಎಚ್. ಪುಟ್ಟಪ್ಪಗೌಡ್ರ, ವಿ.ಆರ್. ಓಲೇಕಾರ, ಎಸ್.ಜಿ. ಶಿರಿಗೌಡ್ರ, ಜಿ.ಎಚ್. ತಳವಾರ, ಜೆ.ಜಿ. ಕರೇಗೌಡ್ರ, ಸಿ.ಎಸ್. ಸೋಮನಹಳ್ಳಿ ಉಪಸ್ಥಿತರಿದ್ದರು.  ಎಂ.ಬಿ. ಸಾವಜ್ಜಿಯವರ ಸ್ವಾಗತಿಸಿದರು. ಆರ್. ಬಿ. ತೆವರಿ ಪ್ರಾರ್ಥಿಸಿದರು. ಎಂ.ಎಚ್. ಹರವಿಶೆಟ್ಟರ್ ನಿರೂಪಿಸಿದರು.ಜಿಲ್ಲಾ ಮಟ್ಟಕ್ಕೆ ಆಯ್ಕೆ

ರಾಣೆಬೆನ್ನೂರು:
ತಾಲ್ಲೂಕಿನ ಹಲಗೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಓಂ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ನಂದೀಶ್.ಆರ್. ಶಿವಲಿಂಗಪ್ಪನವರ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಸ್ಪರ್ಧೆಯಲ್ಲಿ ನಿಸರ್ಗ ಚಿತ್ರವನ್ನು ಉತ್ತಮವಾಗಿ ರಚಿಸಿ ಅಲ್ಲಿ ನೆರೆದಿದ್ದ ಮಕ್ಕಳ ಹಾಗೂ ತಾಲ್ಲೂಕಿನ ಎಲ್ಲ ಶಿಕ್ಷಕರ ಗಮನಸೆಳೆಯುವಲ್ಲಿ ಪಾತ್ರನಾಗಿದ್ದಾನೆ. ಈ ವಿದ್ಯಾರ್ಥಿಗೆ ಚಿತ್ರಕಲಾ ಶಿಕ್ಷಕ ನಾಮದೇವ ಕಾಗದಗಾರ ಮಾರ್ಗದರ್ಶಕರಾಗಿದ್ದರು.ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅರೆಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಕಬ್ಸಾ ಬೆಂಗಳೂರು ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿಭಾಗದಲ್ಲಿ ಹಿಂದೂಸ್ತಾನಿ ಸಂಗೀತ ಹಾಗೂ ಭಾವಗೀತೆ ಸ್ಪರ್ಧೆಯಲ್ಲಿ ಓಂ ಪಬ್ಲಿಕ್ ಹೈಸ್ಕೂಲಿನ 10ನೇ ತರಗತಿ ವಿದ್ಯಾರ್ಥಿನಿ ರಮ್ಯರಾಣಿ .ಆರ್.ಎಂ ಪ್ರಥಮ, ಕರ್ನಾಟಕ ಸಂಗೀತ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಶಮಿತಾ ಪಾಟೀಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry