ಕಿರುಕುಳ ಆರೋಪ: ಬಿಎಂಟಿಸಿ ಚಾಲಕ ಆತ್ಮಹತ್ಯೆ ಯತ್ನ

7

ಕಿರುಕುಳ ಆರೋಪ: ಬಿಎಂಟಿಸಿ ಚಾಲಕ ಆತ್ಮಹತ್ಯೆ ಯತ್ನ

Published:
Updated:

ಯಲಹಂಕ: ಮೇಲಧಿಕಾರಿಗಳ ಕಿರುಕುಳ ಮತ್ತು ವರ್ಗಾವಣೆಯನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದರೂ ಸ್ಪಂದಿಸದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ಬಿಎಂಟಿಸಿ ಚಾಲಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಬಿಎಂಟಿಸಿ ಬಸ್ ಡಿಪೊ- 30ರ ಪುಟ್ಟೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.ವಿದ್ಯಾರಣ್ಯಪುರದ ನಿವಾಸಿ, ನಿರ್ವಾಹಕ ತುಳಸೀ ದಾಸ್ (42) ತಮ್ಮನ್ನು ವಿನಾಕಾರಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ, ಬೆಳಿಗ್ಗೆ 11 ಗಂಟೆಗೆ ಡಿಪೊ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಮೇಲಧಿಕಾರಿಗಳು ಸ್ಪಂದಿಸದ ಕಾರಣ ಅವರು ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ.ಕೂಡಲೇ ಅವರನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಅಸ್ವಸ್ಥರಾಗಿದ್ದರಿಂದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಬಿಎಂಟಿಸಿ ಬಸ್ ಡಿಪೊ-11 ಮತ್ತು 30ರಲ್ಲಿನ ಟಿಸಿ, ಡಿಸಿ, ಎಟಿಎಸ್ ಮತ್ತು ಡಿಟಿಎಸ್ ಮೇಲಧಿಕಾರಿಗಳು ಕಿರುಕುಳ ನೀಡುತ್ತಾರೆ.ಅಧಿಕಾರಿಗಳನ್ನು ಪ್ರಶ್ನಿಸಿದವರನ್ನು ವಿನಾಕಾರಣ ವರ್ಗಾವಣೆ ಮಾಡುತ್ತಾರೆ ಹಾಗೂ ತಾನು ದಲಿತ ಎಂಬ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದೆ ಎಂದು ತುಳಸೀ ದಾಸ್ ತಿಳಿಸಿದ್ದಾರೆ.ಇತ್ತೀಚೆಗೆ ರಾಜಾನುಕುಂಟೆಯಲ್ಲಿ ಚಾಲಕನ ಮೇಲೆ ಸಾರ್ವಜನಿಕರು ನಡೆಸಿದ್ದ ಹಲ್ಲೆಯನ್ನು ಖಂಡಿಸಿ, ಡಿಪೊ-11 ಮತ್ತು 30ರ ಚಾಲಕ, ನಿರ್ವಾಹಕರು ಬಸ್‌ಗಳನ್ನು ಡಿಪೊದಿಂದ ಹೊರಗೆ ಹೋಗದಂತೆ ತಡೆದು, ದೊಡ್ಡಬಳ್ಳಾಪುರ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಕಾರಣಕ್ಕಾಗಿ ಅಧಿಕಾರಿಗಳು ಕೆಲವರನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡು ಕಿರುಕುಳ ನೀಡುವುದು, ವರ್ಗಾವಣೆ ಮಾಡುವಂತಹ ಕೃತ್ಯಗಳನ್ನು ಎಸಗುತ್ತ್ದ್ದಿದು, ಅಂದಿನ ಪ್ರತಿಭಟನೆಯ ಪ್ರತಿಫಲವೇ ಇಂದಿನ ವರ್ಗಾವಣೆ ಎಂದು ನಿರ್ವಾಹಕರು ಹೇಳಿದ್ದಾರೆ.ಪ್ರತಿ ದಿನ ಇಲ್ಲಿ ಸಾವಿರಾರು ರೂಪಾಯಿ ಅವ್ಯವಹಾರ ನಡೆಯುತ್ತಿದ್ದು, ನೋಡಿಕೊಂಡು ಸುಮ್ಮನೇ ಇರುವವರಿಗೆ ಯಾವುದೇ ಶಿಕ್ಷೆಯಿಲ್ಲ. ಆದರೆ ಈ ಬಗ್ಗೆ ಪ್ರಶ್ನಿಸುವವರಿಗೆ ವರ್ಗಾವಣೆ, ದೂರದ ಮಾರ್ಗಗಳಿಗೆ ಕೆಲಸಕ್ಕೆ ಹಾಕುವುದು, ನಿಯಮದ ಪ್ರಕಾರ ಒಂದೇ ಬಾರಿ ಟ್ರಿಪ್ ಇದ್ದರೂ ಹೆಚ್ಚಿನ ಟ್ರಿಪ್‌ಗಳನ್ನು ಹಾಕುವ ಮೂಲಕ ಒತ್ತಡ ಹೇರುವಂತಹ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ನಿರ್ವಾಹಕರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry