ಕಿರುಕುಳ: ಐಎಎಸ್ ಅಧಿಕಾರಿ ಸೆರೆ

7

ಕಿರುಕುಳ: ಐಎಎಸ್ ಅಧಿಕಾರಿ ಸೆರೆ

Published:
Updated:

ಲಖನೌ (ಪಿಟಿಐ): ದೆಹಲಿ ಮೂಲದ ತರುಣಿಯ ಮೇಲೆ ರೈಲಿನಲ್ಲಿ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇರೆಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.`ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಮಹಿಳೆ ನೀಡಿದ ದೂರಿನನ್ವಯ ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿ ಶಶಿ ಭೂಷಣ್ ವಿರುದ್ಧ ಐಪಿಸಿ ಕಲಂ 354 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ~ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.`ಲಖನೌ ಮೇಲ್ ರೈಲಿನಲ್ಲಿ ದೆಹಲಿಯಿಂದ ಲಖನೌಗೆ ತನ್ನೊಡನೆ ಪ್ರಯಾಣಿಸುತ್ತಿದ್ದ ಶಶಿ ಅವರು ಅನುಚಿತವಾಗಿ ವರ್ತಿಸಿದ್ದಾರೆ~ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry