ಶನಿವಾರ, ಮೇ 21, 2022
25 °C

ಕಿರುಕುಳ ಖಂಡಿಸಿ ದಿಢೀರ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ನಗರದ ಹೊರ ವಲಯದಲ್ಲಿ ಮಾಗೋಡ ರಸ್ತೆಯಲ್ಲಿರುವ ವಾಕರಾರಸಾರಿಗೆ ಸಂಸ್ಥೆಯ ಘಟಕದಲ್ಲಿ ವಾಹನ ಚಾಲಕರು- ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ದಿನಾಲು ಕರ್ತವ್ಯಕ್ಕೆ ಹೋಗುವಾಗ ಅನಾವಶ್ಯಕವಾಗಿ ಕಿರುಕುಳ ನೀಡುತ್ತಾರೆ ಎಂದು ಅವರ ವಿರುದ್ದ ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.ವಾಹನ ಚಾಲಕರು ಮತ್ತು ನಿರ್ವಾಹಕರು ಘಟಕದಲ್ಲಿ ವ್ಯವಸ್ಥಾಪಕರ ವಿರುದ್ಧ ಮಾತನಾಡುತ್ತ ಕುಳಿತಾಗ   ಮಾತಿನ ಚಕುಮಿಕಿ ತಾರಕ್ಕೇರಿ ವ್ಯವಸ್ಥಾಪಕರ ಪ್ರತಿಭಟನೆ ಮಾಡುವ ಹಂತ ತಲುಪಿತು. ಕೂಡಲೇ ಘಟಕ ವ್ಯವಸ್ಥಾಪಕ ಹಲಗೇರಿ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಲು ಹೋದಾಗ ಪ್ರತಿಭಟನಾಕಾರರು ಬಸ್‌ಗಳನ್ನು  ಬಂದ್ ಮಾಡಿ, ಘಟಕದ ಗೇಟ್‌ಗೆ ಬೀಗ ಜಡಿದು ಬಸ್‌ಗಳನ್ನು ಹೊರಗೆ ಬಿಡದೇ ವ್ಯವಸ್ಥಾಪಕರು ಪೊಲೀಸರಿಗೆ ದೂರು ಸಲ್ಲಿಸಲು ಹೋಗಿದ್ದಾರೆ ಬರಲಿ ಎಂದು ಪ್ರತಿಭಟನೆ ಮತ್ತಷ್ಟು ಚುರುಕುಗೊಳಿಸಿದರು.ವ್ಯವಸ್ಥಾಪಕರ ಡಿ. ಮಹೇಶಕುಮಾರ ಅವರು ಮಹಿಳಾ ಮತ್ತು ಪುರುಷ ನಿರ್ವಾಹಕರಿಗೆ, ಚಾಲಕರಿಗೆ ದಿನಾಲು ಕರ್ತವ್ಯಕ್ಕೆ ಹೋಗುವಾಗ ಹಣ ಕೇಳುವುದಲ್ಲದೇ ಅನಾವಶ್ಯಕವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಚಾಲಕರು ಮತ್ತು ನಿರ್ವಾಹಕರು ಆರೋಪಿಸಿದರು.ಹಣ ಕೊಡದೇ ಹೋದರೆ ಡ್ಯೂಟಿ ಬದಲಾವಣೆ ಮಾಡುವುದು, ತಮಗೆ ಬೇಕಾದವರಿಗೆ ಅಥವಾ ಹೆಚ್ಚುಹಣ ಕೊಟ್ಟವರಿಗೆ ಅದನ್ನು ಕೊಡುವುದು ಮಾಡುತ್ತಾರೆ, ರಜೆ ಕೇಳಿದರೆ ಕೊಡದೇ ಸತಾಯಿಸುತ್ತಾರೆ ಎಂದು ದೂರಿದರು. ರಜೆ ನೀಡಲು ಹಣ ಕೇಳುತ್ತಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.ವೈ.ಸಿ. ಮಾಳಗಿ, ಎನ್. ವಿರೇಶ, ಆರ್.ಎಸ್. ಗೌಡರ, ವೈ.ಎಸ್. ಜ್ಯೋತಿ, ಎಸ್.ಸಿ. ಲಮಾಣಿ, ವೈ.ಜಿ. ಮುಗಳಿ, ಬಸವರಾಜ. ಕೆ.ಎಸ್. ಗೌಡರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.