ಕಿರುತೆರೆಯಲ್ಲಿ ಕೋಮಲ್!

7

ಕಿರುತೆರೆಯಲ್ಲಿ ಕೋಮಲ್!

Published:
Updated:

ಬೆಳ್ಳಿತೆರೆಯಲ್ಲಿ ಸಾಲು ಸಾಲು ಹಾಸ್ಯೋತ್ಸವ ನಡೆಸುವ ಕೋಮಲ್‌ಗೆ ಕಿರುತೆರೆ ಮೇಲೆ ಇದ್ದಕ್ಕಿದ್ದಂತೆ ಪ್ಯಾರ್ ಆಗ್‌ಬುಟ್ಟೈತೆ!ಪ್ರೇಕ್ಷಕರನ್ನು ನಗಿಸುವುದನ್ನೇ ಉದ್ದೇಶವಾಗುಳ್ಳ ಜೀ ವಾಹಿನಿಯ `ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಕಾಮಿಡಿ ಶೋನಲ್ಲಿ ಕೋಮಲ್ ಕಾಣಿಸಿಕೊಳ್ಳುತ್ತಿದ್ದಾರೆ.`ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಕಾರ್ಯಕ್ರಮದಲ್ಲಿ ಕೋಮಲ್ ಅವರದ್ದು ತೀರ್ಪುಗಾರರ ಪಾತ್ರ. ಅಷ್ಟು ಮಾತ್ರವಲ್ಲ, ಕಾರ್ಯಕ್ರಮ ನಿರ್ಮಾಣದ ಹೊಣೆ ಹೊತ್ತಿರುವ ಅವರು ಶೀರ್ಷಿಕೆ ಗೀತೆಯನ್ನೂ ಹಾಡಿದ್ದಾರೆ.ಕೋಮಲ್ ಅವರ ಕಾರ್ಯಕ್ರಮದ ಪರಿಕಲ್ಪನೆ ವಿಭಿನ್ನವಾಗಿದೆ. ಪ್ರತೀ ಸಂಚಿಕೆಯಲ್ಲಿ ಒಬ್ಬ `ಕಿಂಗ್ ಕಾಮಿಡಿಯನ್~ ನಾಯಕತ್ವದಲ್ಲಿ ಹಾಸ್ಯ ಕಲಾವಿದರ ಬಳಗ ನಗಿಸುವುದಕ್ಕೆ ತಯಾರಾಗಿರುತ್ತದೆ. ಅದಕ್ಕೆ ಪ್ರತಿಯಾಗಿ ಮತ್ತೊಂದು ತಂಡ ಪ್ರಬಲ ಸವಾಲು ಒಡ್ಡುತ್ತದೆ. ಯಾವ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೋ ಅವರಿಗೆ ಅಂತಿಮವಾಗಿ `ಕರ್ನಾಟಕದ ಕಾಮಿಡಿ ಕಲಾವಿದರ ಅತ್ಯುತ್ತಮ ತಂಡ~ ಎನ್ನುವ ಪಟ್ಟ.ಪ್ರತಿ ಸಂಚಿಕೆಯಲ್ಲಿ ತೀರ್ಪುಗಾರರ ಜೊತೆ ಸೆಲೆಬ್ರಿಟಿಗಳೂ ಇರಲಿದ್ದು, ಅವರೂ ಸ್ಪರ್ಧಿಗಳಿಗೆ ಸವಾಲುಗಳನ್ನು ಎಸೆಯಲಿದ್ದಾರೆ.ಜನಪ್ರಿಯ ರೇಡಿಯೋ ಜಾಕಿ ರ‌್ಯಾಪಿಡ್ ರಶ್ಮಿ ಮತ್ತು ಹಾಸ್ಯನಟ ಬರ್ಕತ್ ಅಲಿ ಜೊತೆಗಿರುತ್ತಾರೆ.ಫೆ.16ರ ಗುರುವಾರದಿಂದ `ಕಾಮಿಡಿ ಕಿಲಾಡಿಗಳು ವಿತ್ ಕೋಮಲ್~ ಪ್ರಸಾರ ಶುರುವಾಗಿದೆ. ಪ್ರಸಾರದ ಸಮಯ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry