ಕಿರುತೆರೆಯಲ್ಲಿ ಮತ್ತೆ ಸಲ್ಮಾನ್‌

7
ಪಂಚರಂಗಿ

ಕಿರುತೆರೆಯಲ್ಲಿ ಮತ್ತೆ ಸಲ್ಮಾನ್‌

Published:
Updated:
ಕಿರುತೆರೆಯಲ್ಲಿ ಮತ್ತೆ ಸಲ್ಮಾನ್‌

ಲ್ಮಾನ್‌ ಖಾನ್‌ ಹಾಗೂ ಆಮಿರ್‌ ಖಾನ್‌ರ ಸಂಬಂಧ ತಿಳಿದೇ ಇದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಗಿದಪ್ಪಿ ಛಾಯಾಗ್ರಾಹಕರಿಗೆ ನೀಡಿದ ಭಂಗಿ ಇನ್ನೂ ಹಸಿರಾಗಿರುವಾಗಲೇ ಆಮೀರ್‌ ಅವರಂತೆಯೇ ಕಿರುತೆರೆಯಲ್ಲೊಂದು ಕಾರ್ಯಕ್ರಮ ನೀಡಲು ಸಲ್ಮಾನ್‌ ಸಜ್ಜಾಗಿದ್ದಾರೆ.‘ಬಿಗ್‌ಬಾಸ್‌’ ಮೂಲಕ ಕಿರುತೆರೆಯಲ್ಲೂ ಸೈ ಎನಿಸಿಕೊಂಡ ಸಲ್ಮಾನ್‌ ಖಾನ್‌ ಇದೀಗ ಸಾಮಾಜಿಕ ಕಳಕಳಿಯ ವಸ್ತುವುಳ್ಳ ಕಾರ್ಯಕ್ರಮವೊಂದನ್ನು ನಿರೂಪಿಸಲು ಒಪ್ಪಿಕೊಂಡಿದ್ದಾರಂತೆ. ಆಮಿರ್‌ ನಡೆಸಿಕೊಡುತ್ತಿದ್ದ ‘ಸತ್ಯಮೇವ ಜಯತೆ’ ಕಾರ್ಯಕ್ರಮದಂತೆಯೇ ಇದು ಜನರು ಎದುರಿಸುತ್ತಿರುವ ಕಷ್ಟ ಹಾಗೂ ಸಮಸ್ಯೆಯನ್ನು ನೋಡುವ ದೃಷ್ಟಿಯಲ್ಲಿ ಬದಲಾವಣೆ ತರುವಲ್ಲಿ ಪ್ರಭಾವ ಬೀರುವ ಕಾರ್ಯಕ್ರಮ ಇದಾಗಲಿದೆ ಎನ್ನಲಾಗಿದೆ.ಇಬ್ಬರೂ ನಟರ ಚಿತ್ರಗಳು ಪರಸ್ಪರ ವಿರುದ್ಧ ವಸ್ತುಗಳನ್ನು ಆಧರಿಸಿದ್ದರೂ ಒಬ್ಬರು ಮತ್ತೊಬ್ಬರನ್ನು ಮುಕ್ತಕಂಠದಿಂದ ಹೊಗಳಿಕೊಳ್ಳುವುದು ವಿಶೇಷ. ‘ಆಮಿರ್‌ ಖಾನ್‌ ಅವರು ಸೂಪರ್‌ ಸ್ಟಾರ್‌’ ಎಂದು ಬಣ್ಣಿಸಿರುವ ಸಲ್ಮಾನ್‌ಗೆ ‘ಆತ ನನಗಿಂತ ಉತ್ತಮ ನಟ’ ಎಂದು ಆಮಿರ್‌ ಬಣ್ಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry