ಕಿರುತೆರೆ ನಟಿ ಸುಮಾ ಕೊಲೆ: ವ್ಯಕ್ತಿ ಬಂಧನ

7

ಕಿರುತೆರೆ ನಟಿ ಸುಮಾ ಕೊಲೆ: ವ್ಯಕ್ತಿ ಬಂಧನ

Published:
Updated:

ಹಲಗೂರು: ಇಲ್ಲಿಗೆ ಸಮೀಪದ ನಿಟ್ಟೂರು-ಬುಯ್ಯನದೊಡ್ಡಿ ರಸ್ತೆ ಬದಿ ದೇವಿಕೆರೆ ಹಳ್ಳದಲ್ಲಿ ಗುರುವಾರ ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವವೊಂದು ಪತ್ತೆಯಾಗಿತ್ತು. ಆ ಶವ ಕಿರುತೆರೆ ನಟಿ ಸುಮಾ ಅವರದ್ದೆಂದು ಗುರುತಿಸಲಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದ ಕೆ.ಆರ್.ಪೇಟೆ ಮೂಲದ ಕಿರುತೆರೆ ನಟಿ ಸುಮಾ (22) ಕೊಲೆಯಾದವರು. ಕಾರು ಚಾಲಕನಾದ ಬೆಂಗಳೂರಿನ ಕತ್ರಿಗುಪ್ಪೆಯ ಭುವನೇಶ್ವರನಗರದ ವಾಸಿ ಗುರುರಾಜ್ ಅಲಿಯಾಸ್ ಗುರು ಬಂಧಿತ ವ್ಯಕ್ತಿ. ಈತನನ್ನು ಮಂಗಳವಾರ ಮಳವಳ್ಳಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಕೋರ್ಟ್ ಆದೇಶಿಸಿದೆ.ಪ್ರಕರಣಕ್ಕೆ ಸಂಬಂಧಪಟ್ಟ ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಕೊಲೆಗೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಡಿ.ವೈ.ಎಸ್.ಪಿ ಹನುಮಂತರೆಡ್ಡಿ, ವೃತ್ತ ನಿರೀಕ್ಷಕ ರಾಜೇಶ್ ಮಾರ್ಗದರ್ಶನದಲ್ಲಿ ಆರಕ್ಷಕ ಉಪನಿರೀಕ್ಷಕ ಎಸ್.ಗಂಗಾಧರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಅನುಮಾನಾಸ್ಪದವಾಗಿ ಕಾರು ಸುತ್ತಾಡಿದ ಜಾಡು ಹಿಡಿದು ಕೊಲೆಗಾರನನ್ನು ಪತ್ತೆ ಮಾಡಿದ್ದಾರೆ. ಪ್ರೀತಿ ಮತ್ತು ಹಣ ಕೊಲೆಗೆ ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry