ಕಿರು ಧಾನ್ಯ ಬೆಳೆಗಳ ಸಂರಕ್ಷಕಿ ಜಯಮ್ಮ

7

ಕಿರು ಧಾನ್ಯ ಬೆಳೆಗಳ ಸಂರಕ್ಷಕಿ ಜಯಮ್ಮ

Published:
Updated:

ರಟ್ಟೀಹಳ್ಳಿ: ತಾತ. ಮುತ್ತಾತ ಬೆಳೆಯುತ್ತಿದ್ದ ಸಜ್ಜೆ. ನವಣೆ. ಸಾವಿ. ರಾಗಿ. ಹಾರಕ. ಮುಂತಾದ ಕಿರು ಧಾನ್ಯಗಳು ಇಂದು ಕಣ್ಮರೆಯಾಗುತ್ತಿವೆ. ಮುಂದಿನ ಪೀಳಿಗೆ ಇವುಗಳ ಹೆಸರನ್ನೂ ಕೂಡಾ ಉಚ್ಛಾರ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಯಾರೂ ಇವುಗಳ ಬಗ್ಗೆ ಗಮನ ನೀಡುತ್ತಿಲ್ಲ. ಆದರೆ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಕಿರು ಧಾನ್ಯಗಳನ್ನು ಬೆಳೆದು ಸಂರಕ್ಷಿಸುವ ಕಾರ್ಯ ಕೈಗೊಂಡಿದ್ದಾರೆ. ಅವರಲ್ಲಿ ಈ ಜಯಮ್ಮ.ಎನ್.ಚನ್ನಗೌಡ್ರ ಒಬ್ಬರು.ಇಲ್ಲಿಗೆ ಸಮೀಪದ ದೊಡ್ಡಗುಬ್ಬಿ ಗ್ರಾಮದ ತಮ್ಮ ಒಂದು ಎಕರೆ ಹೊಲ ದಲ್ಲಿ ಕಿರು ಧಾನ್ಯ ಬೆಳೆಯಾದ. ಬರ ಗಾಲದ ಮಿತ್ರ ಎಂದೇ ಕರೆಸಿಕೊಳ್ಳುವ `ನವಣೆ~ ಬೆಳೆದು ಎಲ್ಲರನ್ನು ಅಚ್ಚರಿ ಗೊಳಿಸಿದ್ದಾರೆ. ಇಂದು ಇವರ ಹೊಲ ದಲ್ಲಿ ನವಣೆಯ 8 ತಳಿಗಳನ್ನು ನಾವು ಕಾಣಬಹುದು. ಯಡೂರ ನವಣೆ. ಕೆಂಪು ನವಣೆ. ಬಿಳಿ ನವಣೆ. ಕರಿ ನವಣೆ. ಮರ ನವಣೆ. ಚಂದ್ರ ನವಣೆ. ಮಬ್ಬ ನವಣೆ. ಮತ್ತು ಹುಲ್ಲು ನವಣೆ. ಹೊಲ ದಲ್ಲಿ ಸಮೃದ್ಧ ಫಸಲು ನೋಡುಗರ ಕಣ್ಮನಗಳನ್ನು ತಣಿಸುತ್ತಿದೆ.3-4 ತಿಂಗಳಲ್ಲಿ ಫಸಲಿಗೆ ಬರುವ ನವಣೆ ನಗರ ಪ್ರದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಪಡೆದಿದೆ. ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಯಿಡಬಹುದಾದ ಏಕೈಕ ಬೆಳೆ ನವಣೆ. ಇದನ್ನು ಉಪಯೋಗಿಸಿದಷ್ಟು ಬಲ ಶಾಲಿಯಾಗುತ್ತಾರೆ.ಇಂದು ನವಣೆಯಿಂದ ವಿವಿಧ ಖಾದ್ಯ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ಸಿಹಿ ಪದಾರ್ಥ. ಹಪ್ಪಳ. ಸಂಡಿಗೆ. ಚಕ್ಕಲಿ. ಬಿಸ್ಕತ್. ರೊಟ್ಟಿ. ಅನ್ನ. ಹೀಗೆ ವಿವಿಧ ಪದಾರ್ಥ ಗಳನ್ನು ತಯಾರು ಮಾಡಿ ಸ್ವೀಕರಿಸುವು ದರ ಮೂಲಕ ಮಧು ಮೇಹ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡ ಬಹುದು.ನವಣೆ ಬೆಳೆಯನ್ನು ಜಯಮ್ಮನ ವರು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ. ನವಣೆಗೆ ಕನಿಷ್ಠ ಬೆಲೆ 60 ರೂ ಸಿಗುತ್ತದೆ. ಎಂದು ಹೆಮ್ಮೆಯಿಂದ ಹೇಳುತ್ತಾರೆ. ಕಿರು ಧಾನ್ಯಗಳ ಪರಿಚಯ ಕಾರ್ಯ ಕ್ರಮ ಎಲ್ಲಿಯೇ ಇರಲಿ ಅಲ್ಲಿಗೆ ಹೋಗಿ ಧಾನ್ಯಗಳ ಪರಿಚಯ ಮಾಡಿಸಿ ಮಾರಾಟ ಮಾಡಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

 

ಎಲ್ಲ ರೈತರು ವಾಣಿಜ್ಯ ಬೆಳೆಗಳತ್ತ ಗಮನ ನೀಡಿದರೆ ಜಯಮ್ಮ ಮಾತ್ರ ಕಿರು ಧಾನ್ಯ ಬೆಳೆದು ಕಡಿಮೆ ಲಾಭ ಪಡೆದರೂ ಕಿರು ಧಾನ್ಯ ಬೆಳೆಗಳನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.ಕಿರು ಧಾನ್ಯಗಳಲ್ಲಿ ಅನೇಕ ವಿಧ ಗಳಿದ್ದರೂ ಇವರು ನವಣೆಯನ್ನು ಮಾತ್ರ ಬೆಳೆಯುತ್ತಾರೆ. ಬೀಜ ಸಂಗ್ರ ಹಿಸಿ ಆಸಕ್ತರಿಗೆ ಮಾರಾಟ ಮಾಡು ತ್ತಾರೆ. 9844526549 ಇವರನ್ನು ಸಂಪರ್ಕಿಸಬಹುದು. `ನವಣಕ್ಕಿ ಉಂಡು ನೂರ್ಕಾಲ ಬಾಳಿ~ ಎಂದು ಹರಸುತ್ತಿದ್ದಾಳೆ ಈ ರೈತ ಮಹಿಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry