ಕಿರು ಹಗುರ ವಿಮಾನ ಲಕ್ಷ್ಯ-1: ಯಶಸ್ವೀ ಪರೀಕ್ಷೆ

7

ಕಿರು ಹಗುರ ವಿಮಾನ ಲಕ್ಷ್ಯ-1: ಯಶಸ್ವೀ ಪರೀಕ್ಷೆ

Published:
Updated:

ಬಾಲಸೋರ್ (ಒಡಿಶಾ) (ಪಿಟಿಐ): ಭಾರತವು ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಚಾಲಕ ರಹಿತ  ~ಲಕ್ಷ್ಯ-1~  ಕಿರು ಹಗುರ ವಿಮಾನವನ್ನು ಇಲ್ಲಿಗೆ ಸಮೀಪದ ಚಂಡಿಪುರ ಸಮಗ್ರ ಪರೀಕ್ಷಾ ವಲಯದಿಂದ ಬುಧವಾರ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.  ಕಂಪ್ಯೂಟರ್ ನಿಯಂತ್ರಿತ ಎಂಜಿನ್ ಗೆ ಜೋಡಿಸಲಾಗಿದ್ದ ~ಲಕ್ಷ್ಯ-1~ ವಿಮಾನವನ್ನು ಮಧ್ಯಾಹ್ನ 1.10ರ ವೇಳೆಗೆ ಯಶಸ್ವಿಯಾಗಿ ಹಾರಿಸಲಾಯಿತು. ಸಂಚಾರಿ ಉಡಾವಣಾ ವಾಹನದ ಮೂಲಕ ಈ ಪರೀಕ್ಷಾ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ಹೇಳಿವೆ.ಕಿರು ಹಗುರ ವಿಮಾನದ ಹಾರಾಟದ ಅವಧಿ ಸಾಮಾನ್ಯವಾಗಿ 30ರಿಂದ 35 ನಿಮಿಷಗಳು. ಆದರೆ ಈ ಅವಧಿಯ ವಿಸ್ತರಣೆ ಮತ್ತು ಮಾನದಂಡಗಳ ಪರೀಕ್ಷೆಗಾಗಿ ಈದಿನದ ಪರೀಕ್ಷಾ ಹಾರಾಟವನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿದವು.ಮರುಬಳಕೆ ಮಾಡಬಲ್ಲಂತಹ ವೈಮಾನಿಕ ಗುರಿ ವ್ಯವಸ್ಥೆಯ ಸಬ್ ಸಾನಿಕ್ ~ಲಕ್ಷ್ಯ~ ನೆಲದಿಂದಲೇ ನಿಯಂತ್ರಿಸಬಹುದಾದ ದೂರ ನಿಯಂತ್ರಿತ ವಿಮಾನವಾಗಿದೆ.2000ದಿಂದೀಚೆಗೆ ~ಲಕ್ಷ್ಯ~ವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದ್ದು, ಇದನ್ನು ಬೆಂಗಳೂರಿನಲ್ಲಿರುವ ಭಾರತದ ವೈಮಾನಿಕ ಅಭಿವೃದ್ಧಿ ಪ್ರತಿಷ್ಠಾನ (ಎಡಿಇ) ಅಭಿವೃದ್ಧಿ ಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry