ಕಿವುಡ ಮಕ್ಕಳ ಚರ್ಚಾ ಸ್ಪರ್ಧೆ

7

ಕಿವುಡ ಮಕ್ಕಳ ಚರ್ಚಾ ಸ್ಪರ್ಧೆ

Published:
Updated:
ಕಿವುಡ ಮಕ್ಕಳ ಚರ್ಚಾ ಸ್ಪರ್ಧೆ

ಬೆಂಗಳೂರು:  ಫೋರಂ ವ್ಯಾಲೂ ಮಾಲ್ ರೋಟರಿ ಕ್ಲಬ್ ಸಹಯೋಗದೊಂದಿಗೆ ಶನಿವಾರ ಮೂಕ ಮತ್ತು ಕಿವುಡ ಮಕ್ಕಳಿಗಾಗಿ ಅಂತರ ಶಾಲಾ ಚರ್ಚಾಕೂಟವನ್ನು ಅಯೋಜಿಸಿತ್ತು. ಚರ್ಚಾಕೂಟದಲ್ಲಿ ನಗರದ ವಿವಿಧ ಶಾಲೆಗಳ 160 ಮಕ್ಕಳು ಪಾಲ್ಗೊಂಡಿದ್ದರು.ಫೋರಂ ವ್ಯಾಲ್ಯೂ ಮಾಲ್ ನಗರದ ಎಲ್ಲ ಶಾಲೆಗಳನ್ನು ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರೀಕರಿಸಿಕೊಂಡು ಚರ್ಚೆ ಏರ್ಪಡಿಸಲಾಗಿತ್ತು.

ಮಕ್ಕಳ ಮೇಲೆ ಪರಿಣಾಮ ಬಿರುವ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಸಲುವಾಗಿ ಫೋರಂ ವ್ಯಾಲೂ ಮಾಲ್ ಈ ವೇದಿಕೆಯನ್ನು ಆರಂಭಿಸಿದೆ.ಚರ್ಚೆಯಲ್ಲಿ ಕೊತ್ವಾಲ ಇನ್ಸ್‌ಟಿಟ್ಯೂಟ್ ಫಾರ್ ದಿ ಡೆಫ್‌ನ ವಿಶೇಷ ಸಮರ್ಥರು ಕೂಡಾ ಭಾಗವಹಿಸಿದ್ದರು. ಮಕ್ಕಳು ಪ್ರೇಕ್ಷಕರನ್ನು ಸಂಪರ್ಕಿಸಲು ಮಕ್ಕಳು ತಮ್ಮ ಸನ್ನೆ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರೆ, ಭಾಷಾಂತರಕಾರರು ಮತ್ತು ಅನುವಾದಕರು ಚರ್ಚೆಗೆ ಸಹಕರಿಸಿದರು.ಕಾರ್ಯಕ್ರಮದ ಮೂಲಕ  ಕಿವಿ ಕೇಳದ ಮಕ್ಕಳೂ ಕೂಡಾ ತಮ್ಮ ಚಿಂತನೆಗಳನ್ನು ಚರ್ಚೆಯಲ್ಲಿ ವ್ಯಕ್ತ ಪಡಿಸಬಹುದಾಗಿದೆ ಎಂಬುದು ಸಾಬೀತಾಯಿತು. ಮಕ್ಕಳ ಇಂತಹ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ಚಿತ್ರ ನಟಿ ಪದ್ಮಾವತಿ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೊತ್ವಾಲ ಇನ್ಸ್‌ಟಿಟ್ಯೂಟ್ ಫಾರ್ ದಿ ಡೆಫ್‌ನ ವಿಶೇಷ ಸಮರ್ಥರಿಗೆ ಮತ್ತು ಅಂತರ ಶಾಲಾ ಚರ್ಚಾಕೂಟದ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry