ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ವಿತರಣೆ

7

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ವಿತರಣೆ

Published:
Updated:

ಚಿತ್ರದುರ್ಗ: ತಾಲ್ಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಬುಧವಾರ ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ರೈತರ ಕೂಟ ಆಶ್ರಯದಲ್ಲಿ `ಸಂಪೂರ್ಣ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಮ ಘೋಷಣೆ~ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿ ಗ್ರಾಮೀಣ ಬ್ಯಾಂಕ್ ವಲಯ ವ್ಯವಸ್ಥಾಪಕ ಪಿ.ಸಿ. ಗಂಗಾಧರ್, ಸಾಲ ಪಡೆದವರು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಕೇಂದ್ರ ಸರ್ಕಾರದ ಪ್ರೋತ್ಸಾಹಧನದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಕಾಶ್ ಭಂಡಾರಿ ಮಾತನಾಡಿ, ನಬಾರ್ಡ್‌ನಲ್ಲಿ ದೊರೆಯುವ ಪ್ರೋತ್ಸಾಹಧನ ಹಾಗೂ ಸಹಾಯಧನ ನೇರವಾಗಿ ರೈತರಿಗೆ ದೊರಕಿಸಿ ಕೊಡದಿದ್ದರೂ ಸಹ ಪರೋಕ್ಷವಾಗಿ ಗ್ರಾಮೀಣ ಬ್ಯಾಂಕ್ ಮೂಲಕ ರೈತರಿಗೆ ಶೇ. 25ರಷ್ಟು ಸಹಾಯಧನ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದರು.ಜಿ.ಪಂ. ಸದಸ್ಯ ಬಾಬುರೆಡ್ಡಿ ಮಾತನಾಡಿ, ಹೈನುಗಾರಿಕೆ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ ್ಙ 2 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಐವರು ರೈತರಿಗೆ ್ಙ 2 ಲಕ್ಷ ಮೊತ್ತದ ಕೆಸಿಸಿ ಸಾಲಪತ್ರ ಹಾಗೂ 5 ಸ್ವಸಹಾಯ ಗುಂಪುಗಳಿಗೆ ್ಙ 4 ಲಕ್ಷ ಸಾಲಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಅಮೂಲ್ಯ ಆರ್ಥಿಕ ಸಹಾಯ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಖಾನ್, ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಜಿ.ಆರ್. ತಿಪ್ಪೇಸ್ವಾಮಿ ಇತರರು ಹಾಜರಿದ್ದರು.ಜ್ಯೋತಿರಾಣಿ ಸ್ವಾಗತಿಸಿದರು. ಎಚ್. ಶಿವಕುಮಾರ್ ವಂದಿಸಿದರು. ಕೆ.ಸಿ. ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry