`ಕೀಟಲೆ ಕರೆಯಿಂದ ಹೆದರಿ ಜೆಸಿಂತಾ ಆತ್ಮಹತ್ಯೆ'

7

`ಕೀಟಲೆ ಕರೆಯಿಂದ ಹೆದರಿ ಜೆಸಿಂತಾ ಆತ್ಮಹತ್ಯೆ'

Published:
Updated:

ಲಂಡನ್ (ಪಿಟಿಐ):  ಬ್ರಿಟನ್ ಯುವರಾಜ ವಿಲಿಯ್ಸಂ ಪತ್ನಿ ಕೇಟ್ ಮಿಡ್ಲ್‌ಟನ್ ದಾಖಲಾಗಿದ್ದ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿದ್ದ ಭಾರತ ಮೂಲದ ಜೆಸಿಂತಾ ಸಾಲ್ಡಾನಾಗೆ ಆತ್ಮಹತ್ಯೆಗೂ  ಮೊದಲು ಆಸ್ಟ್ರೇಲಿಯಾದ ರೇಡಿಯೊ ಜಾಕಿಗಳಿಂದ ಕೀಟಲೆ ಕರೆಗಳು ಬಂದಿದ್ದು ನಿಜ ಎಂದು ಪತ್ರಿಕೆಯೊಂದು ವರದಿ ಮಾಡಿದೆ.`ಕೇಟ್ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಆಸ್ಟ್ರೇಲಿಯಾದ ಟುಡೆ ಎಫ್‌ಎಂನ ಹಾಟ್ 30 ಶೋ ತಂಡದ ರೇಡಿಯೊ ಜಾಕಿಗಳಾದ ಮೆಲ್ ಗ್ರೇಗ್ ಮತ್ತು ಮೈಕಲ್ ಕ್ರಿಸ್ಟಿಯನ್ ಪದೇ ಪದೇ ದೂರವಾಣಿ ಕರೆ ಮಾಡಿ ಪೀಡಿಸಿದ್ದಾರೆ. ಇದರಿಂದ ಹೆದರಿ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಪತ್ರಿಕೆಯ ತನಿಖಾ ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry