ಕೀನ್ಯಾ: ಮಾಲ್ ಮೇಲೆ ಉಗ್ರರ ದಾಳಿ-ಇಬ್ಬರು ಭಾರತೀಯರು ಸೇರಿದಂತೆ 39 ಜನರ ಹತ್ಯೆ

7

ಕೀನ್ಯಾ: ಮಾಲ್ ಮೇಲೆ ಉಗ್ರರ ದಾಳಿ-ಇಬ್ಬರು ಭಾರತೀಯರು ಸೇರಿದಂತೆ 39 ಜನರ ಹತ್ಯೆ

Published:
Updated:
ಕೀನ್ಯಾ: ಮಾಲ್ ಮೇಲೆ ಉಗ್ರರ ದಾಳಿ-ಇಬ್ಬರು ಭಾರತೀಯರು ಸೇರಿದಂತೆ 39 ಜನರ ಹತ್ಯೆ

ನೈರೋಬಿ (ಪಿಟಿಐ):  ಕೀನ್ಯಾ ರಾಜಧಾನಿ ನೈರೋಬಿಯ ಮಾಲ್‌ನಲ್ಲಿ ಉಗ್ರರು  ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ 39 ಜನರು ಬಲಿಯಾಗಿದ್ದಾರೆ ಎಂದು ಕೀನ್ಯಾ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯರಾದ ಶ್ರೀಧರ್ ನಟರಾಜನ್ ಮತ್ತು ಪರಂಶು ಜೈನ್ ಮೃತಪಟ್ಟಿದ್ದಾರೆ. ದಾಳಿ ಸಂದರ್ಭದಲ್ಲಿ ಇಬ್ಬರು ಭಾರತೀಯ ಮಹಿಳೆಯರು ಮತ್ತು ಒರ್ವ ಬಾಲಕಿ ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.ಶನಿವಾರ ಮಧ್ಯಾಹ್ನ ಮಾಲ್ ಅನ್ನು ಪ್ರವೇಶಿಸಿದ ಬಂದೂಕುದಾರಿ ಇಸ್ಲಾಮಿಕ್ ಉಗ್ರಗಾಮಿಗಳು ಮನಬಂದಂತೆ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 39 ಜನರನ್ನು ಹತ್ಯೆಮಾಡಲಾಗಿದೆ. ಸುಮಾರು 150 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಕೀನ್ಯಾ ಪೊಲೀಸರು ತಿಳಿಸಿದ್ದಾರೆ.ಮಾಲ್‌ನಲ್ಲಿ ಹಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಉಗ್ರರು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಮಾಲ್‌ನಲ್ಲಿರುವ ಜನರನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಕೀನ್ಯಾ ಅಧ್ಯಕ್ಷರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry