`ಕೀರ್ತನೆಗಳಲ್ಲಿ ಲೋಕದ ಅನುಭವ ಅಡಗಿದೆ'

7

`ಕೀರ್ತನೆಗಳಲ್ಲಿ ಲೋಕದ ಅನುಭವ ಅಡಗಿದೆ'

Published:
Updated:

ಶನಿವಾರಸಂತೆ: ಕನಕ ಸಂತನಾಗಿ ಸಮಾಜಕ್ಕೆ ಅತ್ಯುತ್ತಮ ಕೀರ್ತನೆಗಳ ಕೊಡುಗೆ ನೀಡಿದ್ದಾನೆ ಎಂದು ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರಭಾರ ಉಪಪ್ರಾಂಶುಪಾಲ ಪಿ. ನರಸಿಂಹಮೂರ್ತಿ ಹೇಳಿದರು.ಕಾಲೇಜಿನಲ್ಲಿ ಈಚೆಗೆ ಸರಳವಾಗಿ ನಡೆದ ಕನಕ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಲೋಕಾನುಭವ ಕೀರ್ತನೆಗಳಲ್ಲಿದೆ. ಮಿತಿಗಳಿದ್ದರೂ ಕನಕ ಅಂದಿನ ಬಂಡಾಯ ಕವಿ ಎಂದರು.ಅಧ್ಯಾಪಕ ವಿ. ರಂಗಸ್ವಾಮಿ ಮಾತನಾಡಿ, ಕನಕರ ಬಗ್ಗೆ ಚಿಂತನೆ ಮಾಡುವ ಮನಸ್ಸು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕು. ವಿದ್ಯಾರ್ಥಿಗಳಲ್ಲಿ ಚಿಂತನೆ ಮಾಡುವ ಶಿಕ್ಷಣವನ್ನೂ ನೀಡಬೇಕು. ಚಿಂತನಾ ಶಿಕ್ಷಣದ ವಿಕಾಸವಾಗಬೇಕು ಎಂದರು.

ಶಿಕ್ಷಕ ಸಿ.ಆರ್. ಗೋಪಾಲ್ ಕೀರ್ತನೆಗಳನ್ನು ಹಾಡಿದರು.ಶಿಕ್ಷಕರಾದ ಪುಟ್ಟಸ್ವಾಮಿ, ಬಿ.ವಿ. ಸುಮಾ, ಸಿಬ್ಬಂದಿ ಅಸೀಫ್ ಅಹಮದ್ ಹಾಗೂ ರಮೇಶ್ ಇದ್ದರು. ಸಿ.ಆರ್.ಗೋಪಾಲ್ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry