ಕೀರ್ತಿಲಾಲ್‌ನಿಂದ ವಜ್ರದ ಆಭರಣಗಳ ಸಂಗ್ರಹ

7

ಕೀರ್ತಿಲಾಲ್‌ನಿಂದ ವಜ್ರದ ಆಭರಣಗಳ ಸಂಗ್ರಹ

Published:
Updated:

ಎಲ್ಲಿ ನೋಡಿದರೂ ಆಭರಣಗಳೇ ಕಣ್ತುಂಬಿಕೊಳ್ಳುತ್ತಿದ್ದವು. ಒಂದಕ್ಕಿಂತ ಇನ್ನೊಂದು ಚೆಂದ ಎನ್ನುವ ಗೊಂದಲ ಅದಾಗಲೇ ಅಲ್ಲಿದ್ದ ಗ್ರಾಹಕರ ಮುಖದಲ್ಲಿ ಕಾಣುತ್ತಿತ್ತು. ಕೇವಲ ಚಿನ್ನವನ್ನಷ್ಟೇ ಇಷ್ಟಪಡದ ಅಥವಾ ವಜ್ರವನ್ನು ದುಬಾರಿ ಎಂದು ದೂರ ಸರಿಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡೇ ಕೀರ್ತಿಲಾಲ್ ವಜ್ರದ ಆಭರಣಗಳ ಸಂಗ್ರಹವನ್ನು ತನ್ನ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿತ್ತು.`ಇನ್ನೇನು ಹಬ್ಬಗಳ ಸಾಲು ಬಂದೇಬಿಟ್ಟಿದೆ. ಈ ಕಾರಣಕ್ಕೆಂದೇ ನಮ್ಮ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಲು ವಿಶೇಷ ಆಭರಣ ಸಂಗ್ರಹವನ್ನು ಪರಿಚಯಿಸುತ್ತಿದ್ದೇವೆ. ಮಹಿಳೆಯರಿಗೆ ಆಭರಣಗಳೆಂದರೆ ಸಹಜವಾಗಿ ಮೋಹ ಹೆಚ್ಚು. ಅದರಲ್ಲೂ ವಜ್ರ ಎಂದರೆ ಕೈಗೆಟುಕದ್ದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಈ ಬಾರಿಯ ಸಂಗ್ರಹ ಅವರನ್ನು ಚಕಿತಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ಇದು ನಿಮಗೆ ಚಿನ್ನದಂಥ ಅವಕಾಶ~ ಎಂದು ತಮ್ಮ ಆಭರಣ ಸಂಗ್ರಹದ ಬಗ್ಗೆ ಪರಿಚಯಿಸಿಕೊಂಡರು ಕೀರ್ತಿಲಾಲ್ ಮಳಿಗೆ ನಿರ್ದೇಶಕ ರಾಜಕಾಲ್ ಪ್ರಭು.ನವರಾತ್ರಿಯಿಂದ ಆರಂಭಗೊಂಡು ದೀಪಾವಳಿವರೆಗೂ ಹಬ್ಬದ ಸಡಗರ ತುಂಬಿರುತ್ತದೆ. ಈ ಸಂಭ್ರಮವನ್ನು ತಮ್ಮ ಒಡವೆ ವಸ್ತ್ರಗಳ ಮೂಲಕವೂ ವ್ಯಕ್ತಪಡಿಸಲಿ ಎಂಬ ಆಶಯದೊಂದಿಗೆ ಕೀರ್ತಿಲಾಲ್ ವಜ್ರದ ಆಭರಣಗಳ ಸಂಗ್ರಹವನ್ನು ಹೊರತಂದಿದೆಯಂತೆ.30,000 ರೂಪಾಯಿಯಿಂದ ಆರಂಭಗೊಳ್ಳುವ ಈ ಸಂಗ್ರಹದಲ್ಲಿನ ಆಭರಣದ ಬೆಲೆ ಲಕ್ಷ ಲಕ್ಷವನ್ನೂ ಮೀರಲಿದೆ. ಮಧ್ಯಮ ವರ್ಗದ ಚಿನ್ನದ ಆಸೆಯನ್ನು ತಣಿಸುವಂತಹ ಆಯ್ಕೆಗಳೂ ಇಲ್ಲಿ ಹಲವು.`ಕೆಲವರು ಕೇವಲ ಚಿನ್ನದಿಂದ ಒಡವೆ ತಯಾರಿಸಿದರೆ ಇಷ್ಟಪಡುವುದಿಲ್ಲ. ಚಿನ್ನದೊಂದಿಗೆ ಹರಳುಗಳನ್ನು ಜೋಡಿಸಿ ಒಡವೆ ತಯಾರಿಸುವುದು ಹಳೆಯದ್ದಾಯಿತು. ಅದಕ್ಕೆಂದೇ ಚಿನ್ನದೊಂದಿಗೆ ವಜ್ರದ ಕಲ್ಲುಗಳನ್ನು ಸೇರಿಸಿ ವಿನ್ಯಾಸಗೊಳಿಸಿದ ಸಂಗ್ರಹ ಇಲ್ಲಿದೆ. ಇದು ಚಿನ್ನದಿಂದ ವಜ್ರದೆಡೆಗೆ ತಮ್ಮ ಆಯ್ಕೆಯನ್ನು ಬದಲಾಯಿಸಬಯಸುವ ಗ್ರಾಹಕರಿಗೆ. ಇನ್ನು ಕೇವಲ ವಜ್ರವನ್ನು ಬಯಸುವವರಿಗೂ ಆಯ್ಕೆ ವಿಪುಲ. ಚಿನ್ನದ ಒಡವೆ ಪ್ರೇಮಿಗಳೂ ಹಿಂದೆಂದೂ ಕಂಡಿರದ ವಿನ್ಯಾಸವನ್ನು ಇಲ್ಲಿ ಕಾಣಬಹುದು. ವಿನ್ಯಾಸ ಹಾಗೂ ಬೆಲೆಯ ದೃಷ್ಟಿಯಿಂದ ಗ್ರಾಹಕರಿಗೆ ಅನುಕೂಲವಾಗುವಂತಹ ಆಭರಣಗಳನ್ನು ಇಲ್ಲಿ ನೀಡಿದ್ದೇವೆ. ಈ ಬಾರಿ ಇನ್ನೂ ಹೊಸತೆಂದರೆ ಇಟಾಲಿಯನ್ ವಿನ್ಯಾಸವನ್ನು ಒಡವೆಗಳಲ್ಲಿ ಬಳಸಿರುವುದು. ನಮ್ಮದೇ ವಿನ್ಯಾಸಕರಿಂದ ಒಡವೆಗಳ ವಿನ್ಯಾಸ ಸಾಧ್ಯವಾಗಿದೆ~ ಎಂದು ತಮ್ಮ ಉದ್ದೇಶವನ್ನು ಬಿಡಿಸಿಟ್ಟರು ರಾಜಕಾಲ್ ಪ್ರಭು.ನೆಕ್ಲೇಸ್, ಉಂಗುರ, ಕಿವಿಯೋಲೆ, ಕೈ ಬಳೆಗಳು, ಉದ್ದದ ಸರ, ಪದಕ, ಡಾಬು. ಹೀಗೆ ತರಾವರಿ ಆಭರಣಗಳ ಸಂಗ್ರಹ ಇಲ್ಲಿವೆ. ಮದುಮಗಳಿಗಂತೂ ಹೇಳಿ ಮಾಡಿಸಿದ ಒಡವೆ ಸಂಗ್ರಹ. ಪುರುಷರಿಗೂ ಇಲ್ಲಿ ಅವಕಾಶ ಹೆಚ್ಚು.ಖರೀದಿ ಮಾಡುವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ವಜ್ರದ ಆಭರಣ ಗೆಲ್ಲುವ ಅವಕಾಶವನ್ನೂ ಕೀರ್ತಿಲಾಲ್ ನೀಡಿದೆ. ಮೊದಲನೆ ಬಹುಮಾನ 6 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೇಸ್, ಎರಡನೆಯದ್ದು 3 ಲಕ್ಷ ರೂಪಾಯಿಯ ವಜ್ರದ ನೆಕ್ಲೇಸ್, 3ನೆಯದ್ದು 1,20,000 ಬೆಲೆಯ ರಜೆಯ ಪ್ಯಾಕೇಜ್ ಹಾಗೂ ಕೊನೆಯದ್ದು 80,000 ಬೆಲೆಯ ರಜೆಯ ಪ್ಯಾಕೇಜ್.ಹಗುರವಾಗಿರುವ ಈ ಒಡವೆಗಳು ತೊಡಲು ಅಚ್ಚುಮೆಚ್ಚೆನಿಸಲಿವೆ. ಈ ಕೊಡುಗೆ ಅಕ್ಟೊಬರ್ 15 ರಿಂದ ಆರಂಭಗೊಂಡಿದ್ದು, ಡಿಸೆಂಬರ್15ರವರೆಗೂ ಗ್ರಾಹಕರಿಗೆ ಲಭ್ಯ.ಸ್ಥಳ: ಕೀರ್ತಿಲಾಲ್ ಕಾಳಿದಾಸ್ ಜ್ಯುವೆಲ್ಲರ್ಸ್ ಲಿಮಿಟೆಡ್, ನೀಲಾದ್ರಿ ಪ್ಲಾಝಾ, ನಂ 4, ರಾಜಾರಾಮ್‌ಮೋಹನ್‌ರಾಯ್ ರಸ್ತೆ, ರಿಚ್ಮಂಡ್ ವೃತ್ತ. ಸಂಪರ್ಕಕ್ಕೆ: 22103311.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry