ಕುಂಚದಲ್ಲಿ ಸೌಹಾರ್ದ

7

ಕುಂಚದಲ್ಲಿ ಸೌಹಾರ್ದ

Published:
Updated:
ಕುಂಚದಲ್ಲಿ ಸೌಹಾರ್ದ

ಜಗತ್ತಿನ ಪ್ರತಿ ಸಮುದಾಯವು ದೇವರ ಕುರಿತು ತನ್ನದೇ ಆದ ನಂಬಿಕೆ, ಪರಿಕಲ್ಪನೆ ಹೊಂದಿರುತ್ತದೆ. ‘ದೇವನೊಬ್ಬ ನಾಮ ಹಲವು’ ಎಂಬಂತೆ ಬೇರೆ ಬೇರೆ ರೂಪದಲ್ಲಿ ಪೂಜಿಸುತ್ತದೆ. ಇದನ್ನೇ ಕಲಾವಿದೆ ಹೇಮಾವತಿ ಕೃಷ್ಣನ್ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ತಡೆಗೋಡೆಗಳು ಇಲ್ಲದಂತೆ ದೇವರನ್ನು ಪ್ರೀತಿಸಬೇಕು ಎನ್ನುತ್ತಾರೆ.ತಮ್ಮ ಈ ಆಶಯವನ್ನು ಕಲಾಕೃತಿಗಳಲ್ಲಿಯೂ ಚಿತ್ರಿಸುತ್ತಾರೆ. ನೃತ್ಯ ಈ ಎಲ್ಲ ತಡೆಗೋಡೆಗಳನ್ನು ದಾಟಬಲ್ಲದು ಎಂಬ ನಂಬಿಕೆ ಅವರದ್ದು. ಹಾಗಾಗಿ ಅವರ ಕಲಾಕೃತಿಗಳಲ್ಲಿ ನೃತ್ಯ ಪ್ರಧಾನ ಅಂಶವಾಗಿರುತ್ತದೆ. ತಮ್ಮ ಕಲಾಕೃತಿಗಳ ಮಾರಾಟದಿಂದ ಬಂದ ಹಣವನ್ನು ಹಿರಿಯ ಕಲಾವಿದೆಯರ ಕ್ಷೇಮಾಭಿವೃದ್ಧಿಗೆ ಬಳಸುವ ಉದ್ದೇಶವನ್ನೂ ಹೇಮಾವತಿ ಹೊಂದಿದ್ದಾರೆ.ಅವರ ಕಲಾಕೃತಿಗಳ ಪ್ರದರ್ಶನ ಶುಕ್ರವಾರದವರೆಗೆ ಮುಂದುವರಿಯಲಿದೆ. ಸ್ಥಳ: ಗ್ಯಾಲರಿ ಹ್ಯಾಬಿಟ್ಯೂಟ್, 2ನೇ ಮಹಡಿ, ಎಡಿಎ ರಂಗಮಂದಿರ  (ರವೀಂದ್ರ ಕಲಾಕ್ಷೇತ್ರ ಎದುರು) ಜೆ.ಸಿ. ರಸ್ತೆ. ಬೆಳಿಗ್ಗೆ 11ರಿಂದ  ಸಂಜೆ 7. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry