ಗುರುವಾರ , ಮೇ 26, 2022
31 °C

ಕುಂದಾಪುರ: ಎಚ್‌ಐವಿ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಅಂತರರಾಷ್ಟ್ರೀಯ ಜನಸೇವಾ ಇಲಾಖೆ, ಗುಜ್ಜಾಡಿ ನವಸಂಘ ಯುವಕ ಮಂಡಲ, ಶ್ರೀನಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಮತ್ತು ಕಿಶೋರಿಯರ ಆಶ್ರಯದಲ್ಲಿ ಇತ್ತೀಚೆಗೆ ಗುಜ್ಜಾಡಿಯ ಕಂಚಗೋಡು ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಶಾಲೆ ಬಿಟ್ಟ ಯುವಕ/ಯುವತಿಯರಿಗಾಗಿ ‘ಎಚ್‌ಐವಿ ಜಾಗೃತಿ ಅಭಿಯಾನ’ ಕಾರ್ಯಕ್ರಮ ನಡೆಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವನಾಗಪ್ಪ, ಗ್ರಾ.ಪಂ. ಸದಸ್ಯರಾದ ಕೃಷ್ಣ ಖಾರ್ವಿ, ರಾಮದಾಸ ವಿಠಲ್ ಖಾರ್ವಿ ಹಾಗೂ ಸಂಪರ್ಕ ಕಾರ್ಯಕರ್ತರಾದ ರೇಣುಕಾ ಇದ್ದರು.ಈ ಸಂದರ್ಭ ಡಾ.ಅಶೋಕ ಹಾಗೂ ಡಾ.ರಾಮದಾಸ ಎಚ್‌ಐವಿ ಹಾಗೂ ಏಡ್ಸ್‌ನಿಂದಾಗುವ ಪರಿಣಾಮ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.