ಭಾನುವಾರ, ಜೂನ್ 20, 2021
21 °C

ಕುಂದಾಪುರ ಕ್ಷೇತ್ರದ ಮಹಿಳೆಯರಿಂದ ಅತಿ ಹೆಚ್ಚು ಮತದಾನ

ಪ್ರಜಾವಾಣಿ ವಾರ್ತೆ/ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗಾಗಿ ಭಾನುವಾರ ನಡೆದ ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದಾರೆ. ಅದರಲ್ಲೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಹಿಳೆಯರು ಉಳಿದ ಕ್ಷೇತ್ರದವರಿಗಿಂತ ಹೆಚ್ಚು ಪ್ರಮಾಣದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಒಟ್ಟು 6.41 ಲಕ್ಷ ಮಹಿಳಾ ಮತದಾರರಲ್ಲಿ 4.32 ಲಕ್ಷ ಮಹಿಳೆಯರು ತಮ್ಮ ಮತ ಚಲಾಯಿಸಿದ್ದಾರೆ. ಒಟ್ಟು 6.10 ಲಕ್ಷ ಪುರುಷ ಮತದಾರರಲ್ಲಿ 4.20 ಲಕ್ಷ ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಷ್ಟಕ್ಕೂ ಈ ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರದೇ ನಿರ್ಣಾಯಕ ಪಾತ್ರ.ಒಟ್ಟು ಮತದಾನದ ಪ್ರಮಾಣ ಶೇ 68.27ರಷ್ಟು ನಡೆದಿದ್ದು, ಅತಿ ಹೆಚ್ಚು ಮತದಾನ ಕಾರ್ಕಳದಲ್ಲಿ (ಶೇ 74.12) ಹಾಗೂ ಅತಿ ಕಡಿಮೆ ಮತದಾನ (ಶೇ 58.72) ತರೀಕೆರೆಯಲ್ಲಿ ನಡೆದಿದೆ. ಒಟ್ಟು 12.52 ಲಕ್ಷ ಮತದಾರರಲ್ಲಿ 8.52 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 1,69,668 ಮತ ದಾರರಿದ್ದು, ಈ ಪೈಕಿ ಮಾಡಿದವರ ಸಂಖ್ಯೆ 1,24,293. ಇದರಲ್ಲಿ  90,269 ಮಹಿಳೆಯರಿದ್ದು, 67,706 ಮಂದಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮಹಿಳಾ ಮತದಾರರಿದ್ದ ಕ್ಷೇತ್ರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ (ಒಟ್ಟು 91,338 ಮಹಿಳಾ ಮತದಾರರು) ಮತ ಹಾಕಿದ ಮಹಿಳೆಯರ ಸಂಖ್ಯೆ ಕೇವಲ 52,204. ಅತಿ ಹೆಚ್ಚು ಪುರುಷ ಮತದಾರರಿದ್ದ ಕ್ಷೇತ್ರ ಕೂಡ ಚಿಕ್ಕಮಗಳೂರು. ಆದರೆ ಇಲ್ಲಿ ಮತದಾನ ಮಾಡಿದ ಪುರುಷರ ಸಂಖ್ಯೆ 57,204 ಮಂದಿ ಮಾತ್ರ.  ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಉಡುಪಿ-ಚಿಕ್ಕಮಗಳೂರಿನಲ್ಲಿ  ಅತಿ ಹೆಚ್ಚಿನ ಮತದಾನ (ಶೇ 74.12) ಕಾರ್ಕಳದಲ್ಲಿ  (ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರ ಊರು) ನಡೆದಿದೆ. ವಿಶೇಷವೆಂದರೆ ಇದು ಕಾಂಗ್ರೆಸ್ ಅಧಿಕಾರದಲ್ಲಿರುವ ವಿಧಾನಸಭಾ ಕ್ಷೇತ್ರ. ಇಲ್ಲಿನ ಒಟ್ಟು ಮತದಾರರ ಸಂಖ್ಯೆ 1,51,240 ಇದ್ದು ಅವರಲ್ಲಿ 1,12,104 ಮಂದಿ ಮತ ಹಾಕಿದ್ದಾರೆ.ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 79,335 ಪುರುಷ ಮತದಾರರಿದ್ದರೆ ಅವರಲ್ಲಿ 57,951 ಮಂದಿ ಮತ ಚಲಾಯಿಸಿದ್ದಾರೆ. 61,555ಮಹಿಳೆಯರು ಮತ ಚಲಾಯಿಸಿದ್ದಾರೆ. ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ  (69,982) ಹಾಗೂ ಮಹಿಳಾ (69,805) ಮತದಾರರ ನಡುವಣ ಅಂತರ ಕೇವಲ 177 ಮಾತ್ರ. ಆದರೆ ಮತದಾನದಲ್ಲಿ ಕೂಡ ಕೇವಲ ಪುರುಷ ಮತ್ತು ಮಹಿಳಾ ಮತದಾರರ ನಡುವಣ ಅಂತರ ಕೇವಲ 1,076 ಮಾತ್ರ.ಮುಖ್ಯಾಂಶಗಳು

* ಅತಿ ಹೆಚ್ಚು ಮತದಾನ: ಕಾರ್ಕಳ ಶೇ 74.12* ಮಹಿಳೆಯರು ಅತಿ ಹೆಚ್ಚು ಮತದಾನ ಮಾಡಿದ ಕ್ಷೇತ್ರ: ಕುಂದಾಪುರ  

  

* ಅತಿ ಹೆಚ್ಚು ಮಹಿಳಾ ಮತದಾರರಿದ್ದ ಕ್ಷೇತ್ರ: ಚಿಕ್ಕಮಗಳೂರು. (ಮತದಾನ ಮಾತ್ರ ಕಡಿಮೆ).* 12.52 ಲಕ್ಷ ಮತದಾರರಲ್ಲಿ 8.52 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದಾರೆ.* 6.41 ಲಕ್ಷ ಮಹಿಳಾ ಮತದಾರರಲ್ಲಿ 4.32 ಲಕ್ಷ ಮಂದಿಯಿಂದ ಮತ ಚಲಾವಣೆಕುಂದಾಪುರ -1,24,293 (ಪು-56,587, ಮ-67,706)ಉಡುಪಿ  -  1,19,502 (ಪು-57,951, ಮ-61,551)ಕಾಪು- 
1,01,337 (ಪು-47,046, ಮ-54,291)ಕಾರ್ಕಳ-
1,12,104 (ಪು-51,805, ಮ-60,299).ಶೃಂಗೇರಿ - 1,03,170 (ಪು-52,123, ಮ-51,047)ಮೂಡಿಗೆರೆ-92,541 (ಪು-48,160, ಮ-44,381)ಚಿಕ್ಕಮಗಳೂರು-1,09,621(ಪು-57,204,ಮ-52,417)ತರೀಕೆರೆ- 90,386 (ಪು-49,410, ಮ-40,976)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.