ಶನಿವಾರ, ಏಪ್ರಿಲ್ 17, 2021
23 °C

ಕುಂದಿದ ಭಾರತದ ವರ್ಚಸ್ಸು: ಬಿಜೆಪಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದಲ್ಲಿ ನಿರೀಕ್ಷಿತ ಬದಲಾವಣೆ ತರುವಲ್ಲಿ ವಿಫಲರಾಗಿದ್ದಾರೆ ಎಂಬ `ಟೈಮ್~ ನಿಯತಕಾಲಿಕದ ವರದಿ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ, ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಕುಂದಿಸಿದ್ದಾರೆ ಎಂದು  ಟೀಕಿಸಿದೆ.`ವರ್ಚಸ್ಸು ಕುಂದಿರುವುದಷ್ಟೇ ಅಲ್ಲದೆ ಭ್ರಷ್ಟಾಚಾರ ತಾಂಡವವಾಡುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಸೇರಿದೆ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿ ಮೂಡಿರುವುದು ಬೇಸರದ ವಿಷಯ~ ಎಂದಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಪ್ರಧಾನಿ ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದರು.`ಈ ಆರೋಪದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಅವರೇ ತಮ್ಮ ರಾಜಕೀಯ ಅಧಿಕಾರವನ್ನು ಪ್ರಧಾನಿಗೆ ನೀಡಿರುವುದರಿಂದಲೇ ದೇಶ ಇಂದು ಇಂಥ ಪರಿಸ್ಥಿತಿ ಎದುರಿಸುವಂತಾಗಿದೆ~ ಎಂದು ಕಿಡಿಕಾರಿದರು.ಚಿದಂಬರಂ ಸಮರ್ಥನೆ: ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಭಾರತ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಹಿಂಜರಿತ ಪರಿಸ್ಥಿತಿಯಿಂದ ಖಂಡಿತಾ ಹೊರಬರಲಿದೆ ಎಂದು ಹೇಳಿದ್ದಾರೆ.`ಬಿಜೆಪಿ ಟೀಕೆ ನಾಚಿಕೆಗೇಡಿನ ಸಂಗತಿ. 2002ರ ಜೂನ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಕುರಿತ ಲೇಖನ ಓದಿದ ರವಿಶಂಕರ್ ಪ್ರಸಾದ್, ಈ ರೀತಿ ಟೀಕೆ ಮಾಡಿರುವುದು ಆಶ್ಚರ್ಯ ತಂದಿದೆ~ ಎಂದು ತರಾಟೆಗೆ ತೆಗೆದುಕೊಂಡರು.ಜೆಡಿಯು ಟೀಕೆ: ಮುಕ್ತ ಮಾರುಕಟ್ಟೆ ಬೆಂಬಲಿಸುತ್ತಿರುವ ಕೇಂದ್ರ ಸರ್ಕಾರ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜೆಡಿಯು ಒತ್ತಾಯಿಸಿದೆ. `ಕೇಂದ್ರವು ಅಮೆರಿಕ ಮತ್ತು ಯೂರೋಪ್ ಆರ್ಥಿಕತೆ ಮಾದರಿ ಅನುಸರಿಸುತ್ತಿದೆ. ಪ್ರಧಾನಿ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಎಲ್ಲಾ ಸಚಿವರು ಮುಕ್ತ ಮಾರುಕಟ್ಟೆ ವ್ಯವಸ್ಥೆ ಕುರಿತು ದಿನವಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ~ ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ವ್ಯಂಗ್ಯವಾಡಿದರು.`ಮುಕ್ತ ಮಾರುಕಟ್ಟೆ ಕುರಿತು ಇಷ್ಟೆಲ್ಲಾ ಪ್ರಯತ್ನ ನಡೆದರೂ ತೃಪ್ತಿ ಹೊಂದದ ಪಾಶ್ಚಿಮಾತ್ಯ ಶಕ್ತಿಗಳು ಇನ್ನೂ ಹೆಚ್ಚಿನದನ್ನು ಬಯಸುತ್ತಿವೆ. ಆಡಳಿತ ಪಕ್ಷ ಮುಕ್ತ ಮಾರುಕಟ್ಟೆಯನ್ನು ಪೋಷಿಸುತ್ತಿದೆ. ಆದರೂ ಪಾಶ್ಚಿಮಾತ್ಯ ಶಕ್ತಿಗಳ ಧೋರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಿಂದ ಸಿಂಗ್ ಹಾಗೂ ಸಚಿವರು ದೊಡ್ಡ ಪಾಠ ಕಲಿಯಬೇಕಾಗಿದೆ~ ಎಂದು ಅವರು ಕಟುವಾಗಿ ಟೀಕಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.