ಕುಂದೂರು: ಬಗೆಹರಿಯದ ನೀರಿನ ಸಮಸ್ಯೆ

7

ಕುಂದೂರು: ಬಗೆಹರಿಯದ ನೀರಿನ ಸಮಸ್ಯೆ

Published:
Updated:

ಚನ್ನರಾಯಪಟ್ಟಣ: ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿರುವ ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮಕ್ಕೆ ಕಳೆದ 4 ದಿನಗಳಿಂದ  ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಕಳೆದ ಎರಡು ತಿಂಗಳ ಹಿಂದೆ ನೀರು ಸರಬರಾಜು ಮಾಡುವ ಟ್ಯಾಂಕಿಗೆ ಸಂಪರ್ಕ ಕಲ್ಪಿಸುವ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಯಿತು. ಹಾಗಾಗಿ ಟ್ಯಾಂಕ್‌ಗೆ ನೀರು ಬರುತ್ತಿಲ್ಲ. ಗ್ರಾಮದಲ್ಲಿ 4 ಕೈಪಂಪ್ ಕೊಳವೆ ಬಾವಿಗಳಿವೆ. ಒಂದು ಸ್ಥಗಿತಗೊಡಿದೆ.  ಉಳಿದ ಮೂರು ಕೊಳವೆ ಬಾವಿಯಲ್ಲಿ ಸಮರ್ಪಕ ನೀರು ಲಭ್ಯವಿಲ್ಲ.

450 ಮನೆಗಳಿರುವ ಗ್ರಾಮದಲ್ಲಿ ಮೂರು ಕೊಳವೆ ಬಾವಿಯಲ್ಲಿ ಲಭ್ಯವಾಗುವ ಅಲ್ಪ ಸ್ವಲ್ಪ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಕುಂದೂರು ಕ್ಷೇತ್ರದಲ್ಲಿ ಜಾತ್ರೆ ಇರುವುದರಿಂದ ನೀರಿನ ಬವಣೆ ನೀಗಿಸಲು ಕಳೆದ ನಾಲ್ಕು ದಿನಗಳಿಂದ ಗ್ರಾಮ ಪಂಚಾಯಿತಿ ಮೂಲಕ ಟ್ರ್ಯಾಕ್ಟರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಮತ್ತೊಮ್ಮೆ ರೇವಣ್ಣ ಅವರನ್ನು        ಭೇಟಿಯಾಗಿ ಚರ್ಚಿಸಿದಾಗ ಸದ್ಯದಲ್ಲಿ    ಹೊಸದಾಗಿ ಕೊಳವೆಬಾವಿ ಕೊರೆಸಿ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗು     ವುದು   ಎಂದು ಭರವಸೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಅವರು ಮಂಗಳವಾರ   ಸುದ್ದಿಗಾರರಿಗೆ   ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry