ಶನಿವಾರ, ಮೇ 15, 2021
25 °C
ಚುಟುಕು ಗುಟುಕು

ಕುಂದ್ರಾ ಹೇಳಿಕೆ ಅಘಾತ ತಂದಿದೆ: ಜಗದಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದ್ರಾ ಹೇಳಿಕೆ ಅಘಾತ ತಂದಿದೆ: ಜಗದಾಳೆ

ನವದೆಹಲಿ (ಪಿಟಿಐ): ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಪೊಲೀಸರ ಮುಂದೆ ಬಹಿರಂಗಗೊಳಿಸಿದ ವಿಷಯದ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಆಘಾತ ವ್ಯಕ್ತಪಡಿಸಿದ್ದಾರೆ.`ಈ ಹೇಳಿಕೆಯಿಂದ ನನಗೆ ಆಘಾತವಾಗಿದೆ. ಬೆಟ್ಟಿಂಗ್ ಆಡುವುದು ತಪ್ಪು. ಅದರಲ್ಲೂ ಐಪಿಎಲ್ ತಂಡದ ಮಾಲೀಕರಾಗಿಯೇ ಬೆಟ್ಟಿಂಗ್ ಆಡುತ್ತಿದ್ದೆ ಎಂದು ಹೇಳಿದರೆ ಸಹಿಸಲಾಗದು. ಇದು ಭಾರತದ ಕ್ರಿಕೆಟ್ ಪ್ರಿಯರಿಗೆ ಆಘಾತ ತಂದಿದೆ.  ರಾಯಲ್ಸ್ ತಂಡವನ್ನು ಐಪಿಎಲ್ ಆಡಳಿತಗಾರರು ಅಮಾನತು ಮಾಡಬೇಕು' ಎಂದು ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.ಜೈಲಿಗೆ ಮರಳಿದ ಅಂಕಿತ್

ನವದೆಹಲಿ (ಪಿಟಿಐ):
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ರಾಜಸ್ತಾನ  ರಾಯಲ್ಸ್ ತಂಡದ ಆಟಗಾರ ಅಂಕಿತ್ ಚವಾಣ್ ಗುರುವಾರ ಜೈಲಿಗೆ ಮರಳಿದ್ದಾರೆ.ವಿವಾಹ ಕಾರಣದಿಂದ ಸೆಷನ್ಸ್ ಕೋರ್ಟ್ ಅಂಕಿತ್‌ಗೆ ಒಂದು ವಾರ ಮಧ್ಯಂತರ ಜಾಮೀನು ನೀಡಿತ್ತು. ಜೂನ್ ಆರರಂದು ಜಾಮೀನಿನ ಅವಧಿ ಮುಗಿದ ಕಾರಣ ಅಂಕಿತ್ ಜೈಲಿಗೆ ವಾಪಸ್ಸಾದರು.ಶ್ರೀಶಾಂತ್ ಸೇರಿದಂತೆ ಇತರ 15 ಮಂದಿಯ ಜಾಮೀನು ವಿಚಾರಣೆ ಶುಕ್ರವಾರ ನಡೆಯಲಿದೆ. ಆದರೆ, ಆಟಗಾರರ ಮೇಲೆ ಮೋಕಾ ಪ್ರಕರಣ ದಾಖಲಿಸಿರುವ ಕಾರಣ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆಯಾಗಿದೆ.ಟೆನಿಸ್: ಕ್ವಾರ್ಟರ್ ಫೈನಲ್‌ಗೆ ದಿವಿಜ್-ರಾಜಾ

ನವದೆಹಲಿ (ಪಿಟಿಐ):
ಭಾರತದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಜೋಡಿ, ಜರ್ಮನಿಯ ಪುರ್ತ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಮೂರನೇ ಶ್ರೇಯಾಂಕಿತ ಭಾರತದ ಜೋಡಿ, ಮೊದಲ ಸುತ್ತಿನಲ್ಲಿ ಸ್ಲೊವಾಕಿಯಾದ ಆ್ಯಂಡ್ರೆಜ್ ಮಾರ್ಟಿನ್ ಹಾಗೂ ಚಿಲಿಯ ಹಾನ್ಸ್ ಪೊಡ್ಲಿಪ್ನಿಕ್ ಕ್ಯಾಸ್ಟಿಲ್ಲೊ ಅವರನ್ನು 6-3,1-6,10-8ರಲ್ಲಿ ಮಣಿಸಿದರು.ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿ, ಜರ್ಮನಿಯ ಕೆವಿನ್ ಕ್ರಾವಿಯೆಟ್ಜ ಹಾಗೂ ಡೊಮಿನಿಕ್ ಸಹೆಜ್ ಸವಾಲನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.