ಕುಂಬಳಗೋಡು ಗ್ರಾಮ ಪಂಚಾಯ್ತಿ: ಗೌರಮ್ಮ ಅಧ್ಯಕ್ಷೆ

7

ಕುಂಬಳಗೋಡು ಗ್ರಾಮ ಪಂಚಾಯ್ತಿ: ಗೌರಮ್ಮ ಅಧ್ಯಕ್ಷೆ

Published:
Updated:

ರಾಜರಾಜೇಶ್ವರಿನಗರ: ಕುಂಬಳ ಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗೌರಮ್ಮ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್. ಪ್ರಸಾದ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಗೌರಮ್ಮ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಆರ್.ಪ್ರಸಾದ್ 11 ಮತ ಪಡೆದು ಆಯ್ಕೆಯಾದರು. ಚಿಕ್ಕರಾಜು 10 ಮತ ಪಡೆದು ಪರಾಭವಗೊಂಡರು.`ಸಮಾಜ ತಿದ್ದಿದ

ವಿವೇಕಾನಂದರು'


ಕೃಷ್ಣರಾಜಪುರ: `ಸ್ವಾಮಿ ವಿವೇಕಾನಂದರು ಸಮಾಜವನ್ನು ತಿದ್ದಲು ತಮ್ಮ ಇಡೀ ಜೀವನವನ್ನು ಸವೆಸಿದ್ದರು' ಎಂದು ಸ್ವಾಮಿ ವಿವೇಕಾನಂದ ವರ್ಷಾಚರಣೆ ರಾಜ್ಯ ಸಮಿತಿಯ ಸದಸ್ಯ ಡಾ.ಎಚ್.ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.ಇಲ್ಲಿಯ ಅಮರಜ್ಯೋತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಿತಿಯ ಸಂಚಾಲಕ ಕೆ.ಎಂ. ಅವರು ಕಶ್ಯಪ ಮಾತನಾಡಿ, `ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು' ಎಂದರು.ಹರಿದಾಸ ಸಂಘದ ಅಧ್ಯಕ್ಷ ಹ.ರಾ.ನಾಗರಾಜ ಆಚಾರ್ಯ, ಸಂಚಾಲಕ ಗುರುಮೂರ್ತಿ ರೆಡ್ಡಿ, ಶಾಲೆಯ ಸಂಸ್ಥಾಪಕ ರಾಜು, ಹಿರಿಯ ಸ್ವಯಂಸೇವಕ ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry